ಲೋರೆಟ್ಟೊ: ಏಸು ಕ್ರಿಸ್ತರರನ್ನು ಶಿಲುಬೆಗೇರಿಸುವ ಮುನ್ನಾ ದಿನವವದ  (ಪವಿತ್ರ ಗುರುವಾರ), ಹಾಗೆಯೇ ಪರಮ ಪ್ರಸಾದ ಸಂಸ್ಕಾರವನ್ನು ಕಥೊಲಿಕ್ ಪವಿತ್ರ ಧರ್ಮಸಭೆಗೆ ಅರ್ಪಿಸಿ ತನ್ನ ಶಿಷ್ಯರೊಂದಿಗೆ ಕೊನೆಯ ಔತಣ ಕೂಟದಲ್ಲಿ, ತನ್ನ12 ಮಂದಿ ಶಿಷ್ಯರ ಪಾದಗಳನ್ನು ತೊಳೆದು ,ಪವಿತ್ರ ಸಭೆಗೆ ತ್ಯಾಗ, ಕ್ಷಮೆ, ಪ್ರೀತಿ ,ಸೇವೆಯ ಸಂದೇಶವನ್ನು ಸಾರುವ ಈ ಸಂದರ್ಭದಲ್ಲಿ  ಲೋರೆಟ್ಟೊ ಸಿಬಿಎಸ್ ಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾದ್ಯಾರಾದ ವಂ. ಸ್ವಾಮಿ ಜೇಸನ್ ಮೊನಿಸ್ ರವರು ಚರ್ಚ್ ವ್ಯಾಪ್ತಿಯ ನೇಮಿಸಿದ 12 ಪ್ರತಿನಿಧಿಗಳ ಪಾದಗಳನ್ನು ತೊಳೆದು ಪವಿತ್ರ ಬಲಿ ಪೂಜೆಯನ್ನು ನೂರಾರು ಭಕ್ತಾದಿಗಳೊಂದಿಗೆ ಅರ್ಪಿಸಿದರು.

ಚರ್ಚ್ ವಂ. ಫ್ರಾನ್ಸಿಸ್ ಕ್ರಾಸ್ತಾ ರವರು  ದೇವರ ವಾಾಕ್ಯದ  ಪ್ರಮೆರೆಗೆ ಪ್ರವಚನ ನೀಡಿದರು. ನೂರಾರು ಭಕ್ತಾದಿಗಳು ಈ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿ ಭಾಗವಹಿಸಿ ಅರ್ಪಿಸಿದರು.