ಭಾರತದ ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಮತ್ತು ಎಂಡಿಎಚ್ ಪ್ರೈವೇಟ್ ಲಿಮಿಟೆಡ್‌ನ ಮಸಾಲೆ ಪುಡಿಗಳನ್ನು ಹಾಂಗ್‌ಕಾಂಗ್ ಆಡಳಿತವು ನಿಷೇಧಿಸಿದೆ.

ಕೆಲವು ತಿಂಗಳ ಹಿಂದೆ ಸಿಂಗಾಪುರ ಕೂಡ ಈ ಮಸಾಲೆಗಳ ಮಾರಾಟ ನಿಷೇಧಿಸಿದೆ. ಕರಿ ಮಸಾಲಾ, ಫಿಶ್ ಮಸಾಲೆಗಳಲ್ಲಿ ಕ್ಯಾನ್ಸರ್ ಕಾರಕ ಎಥೈಲಿನ್ ಆಕ್ಸೈಡ್ ಪತ್ತೆಯಾಗಿರುವುದಾಗಿ ಸೆಂಟರ್ ಫಾರ್ ಫುಡ್ ಸೇಫ್ಟಿ ವರದಿ ನೀಡಿತ್ತು. ಅಡಗೆಗೆ ಬಳಸಬಾರದ ಬಣ್ಣ ಹಾಕಿದ ಮಸಾಲೆಗಳು ಎಂದು ಕೂಡ ಪರೀಕ್ಷೆಯಿಂದ ಸ್ಪಷ್ಟಗೊಂಡಿದೆ.