ಹಾಸನ ಜಿಲ್ಲೆಯ ಅರಸೀಕೆರೆಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಹಿಳಾ ಶಕ್ತಿ ಉಚಿತ ಟಿಕೆಟ್ ಕಟ್ಟಿ ಮಾಡಿದ ಹಾರ ಹಾಕಿ ಕಾನೂನು ವಿದ್ಯಾರ್ಥಿನಿಯೊಬ್ವರು ಸಂಭ್ರಮಿಸಿದರು.

ಕಾನೂನು ವಿದ್ಯಾರ್ಥಿನಿ ಟಿಕೆಟ್‌ ಹಾರ ಹಾಕಿ ಆಶೀರ್ವಾದ ಪಡೆದವರು. ಕಾನೂನು ಓದಲು ಬಸ್ಸಿನಲ್ಲಿ ಹೋಗಲು ತೊಂದರೆ ಇತ್ತು. ಶಕ್ತಿ ಯೋಜನೆ ಬಂದ ಮೇಲೆ ನಿರಾಳವಾಗಿ ಹೋಗಿ ಕಲಿಯಲು ಸಹಾಯವಾಗಿದೆ. ಆ ಟಿಕೆಟ್‌ಗಳನ್ನೇ ಜೋಡಿಸಿ ಈ ಹಾರ ಮಾಡಿದ್ದೇನೆ ಎಂದು ಜಯಶ್ರೀ ಮಾಲಾರ್ಪಣೆ ಮಾಡಿದರು.