ಉಜಿರೆ: ಧರ್ಮಸ್ಥಳದಲ್ಲಿ ಭಾನುವಾರ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜಿನಬಾಲಕನನ್ನು ಮೆರವಣಿಗೆಯಲ್ಲಿ ಚಂದ್ರಶಾಲೆಗೆ ಕರೆತಂದು ಜನ್ಮಾಭಿಷೇಕ, ಅಷ್ಟವಿಧಾರ್ಚನೆ, ಗೀತಾ-ನೃತ್ಯ, ನಾಮಕರಣ ಮಹೋತ್ಸವವನ್ನು ಮಕ್ಕಳೇ ನೆರವೇರಿಸಿದರು.
ಊರಿನ ಶ್ರಾವಕರು -ಶ್ರಾವಕಿಯರು ಉಪಸ್ಥಿತರಿದ್ದು ಸಹಕರಿಸಿದರು.