ಇತ್ತೀಚೆಗೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ (ರಿ) ವತಿಯಿಂದ ವೆಜಿನೇಷನ್ ಹೋಟೆಲ್ ಕುತ್ತಾರಿನಲ್ಲಿ ನಡೆದ  ಶಿಕ್ಷಕರ ದಿನಾಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಫಾಟನೆಗೊಳಿಸಿದ, ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರಾದ ಸನ್ಮಾನ್ಯ ಡಾ.ಸಾಯಿಗೀತಾ ಹೆಗ್ಢೆಯವರು ಮಾತನಾಡಿ,  ಹೆತ್ತವರು ಮತ್ತು ಶಿಕ್ಷಕರು ಮಕ್ಕಳಲ್ಲಿ ಭಾಷೆ ಮತ್ತು ಮಾನವೀಯತೆಯ ಸ್ಪರ್ಶ ಬೆಳಸಬೇಕು. ಇವೆರಡು ಮಕ್ಕಳಲ್ಲಿದ್ದರೆ ಮುಂದಿನ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಮಿಂಚಲು ಸಾಧ್ಯ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮಾಜಿ ಶಾಸಕರಾದ ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗಾತಾಧ್ಯಕ್ಷರಾದ ಕೆ.ಜಯರಾಮ ಶೆಟ್ಟಿಯವರು ಸನ್ಮಾನ ಸ್ವೀಕರಿಸದ ಎಲ್ಲರಿಗೂ ಅಭಿನಂದಿಸಿ, ಕಳೆದ 27ವರ್ಷಗಳಿಂದ ಅಬ್ಬಕ್ಕಳ ಧೈರ್ಯ,ಸಾಹಸದ ಬಗ್ಗೆ ಜನರಿಗೆ, ರಾಜ್ಯಕ್ಕೆ  ಮತ್ತು ದೇಶಕ್ಕೆ ಮುಟ್ಟುವಂತಹ ಕೆಲಸವನ್ನು ಮಾಡಿಕೊಂಡಿದ್ದು ಅದಕ್ಕೆ ಪೂರಕವಾಗಿ ಉಳ್ಳಾಲದಲ್ಲಿ ನೆನೆಗುದಿಗೆ ಬಿದ್ದ ಆಬ್ಬಕ್ಕ ಭವನವನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.

ಗೌರವ ಸನ್ಮಾನ

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿ. ಅಧ್ಯಕ್ಷರಾದ ಮಮತಾ ಡಿ ಎಸ್ ಗಟ್ಟಿ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಇವರನ್ನು ಸನ್ಮಾನಿಸಲಾಯಿತು. 

ಶಿಕ್ಷಕರ ಸನ್ಮಾನ                

ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕರಾದ  ಯು.ಜಾನಕಿ ಪುತ್ರನ್, ನಿವೃತ್ತ ಮುಖ್ಯ ಶಿಕ್ಷಕಿ ಮೊಗವೀರ ಹಿ.ಪ್ರಾ.ಶಾಲೆ, ಉಳ್ಳಾಲ, ಮಲಾರ್ ಎಂ.ಎಚ್, ನಿವೃತ್ತ ಮುಖ್ಯ ಶಿಕ್ಷಕರು ಟಿಪ್ಪು ಸುಲ್ತಾನ್ ಶಾಲೆ ಉಳ್ಳಾಲ, ಎಡಲಿನ್ ಸೆರಾಲಿನ್, ನಿವೃತ್ತ ಶಿಕ್ಷಕರು ಬಿಯಂ ಹಿ.ಪ್ರಾ.ಶಾಲೆ, ಉಳ್ಳಾಲ ಇವರನ್ನು ಸನ್ಮಾನಿಸಲಾಯಿತು. ಇವರ ಪರಿಚಯವನ್ನು ಅನುಪಮ ಜೆ, ಕೆ.ಎಂ.ಕೆ.ಮಂಜನಾಡಿ, ಶಶಿಕಲಾ ಗಟ್ಟಿ ಇವರು ವಾಚಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಿತಿಯ ಗೌರವ ಉಪಾಧ್ಯಕ್ಷರುಗಳಾದ ಶ್ರೀ ಸದಾನಂದ ಬಂಗೇರ , ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿಗಟ್ಟಿ , ಉಳ್ಳಾಲ ನಗರಸಭೆಯ ಸದಸ್ಯರಾದ ಜಬ್ಬಾರ್, ಸುಸ್ಥಿರ ಉಳ್ಳಾಲದ ಕನಸುಗಾರರ ಅಧ್ಯಕ್ಷರಾದ ಕೀಶೋರ್ ಅತ್ತಾವರ್ ಹಾಗೂ ಅಬ್ಬಕ್ಕ ಸಮಿತಿಯ ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ, ದೇವಕಿ ಉಳ್ಳಾಲ್ ಹಾಗೂ ಸಮಿತಿಯ ಪದಾಧಿಕಾರಿಗಳಾದ ಸತೀಶ್ ಭಂಡಾರಿ, ಚಿದಾನಂದ, ಪ್ರವೀಣ್ ಬಸ್ತಿ, ರತ್ನಾವತಿ ಜೆ ಬೈಕಾಡಿ, ಅನುಪಮಾ, ಶಶಿಕಲಾ ಗಟ್ಟಿ, ಮಲ್ಲಿಕಾ ಭಂಡಾರಿ, ಸರೋಜ ಕುಮಾರಿ,  ಮಾಧವಿ ಉಳ್ಳಾಲ್, ಸತ್ಯವತಿ ಜೆ.ಕೆ, ಹೇಮಾ ಕಾಪಿಕಾಡು, ವಾಣಿಗೌಡ, ಜಯಲಕ್ಷ್ಮಿ, ಮುಂತಾದವರು ಉಪಸ್ಥಿತರಿದ್ದರು. 

ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ಸ್ವಾಗತಿಸಿ ಪ್ರಸ್ತಾವಿಸಿದರು.  ಸಮಿತಿಯ ಕಾರ್ಯದರ್ಶಿ ಕೆ.ಎಂ.ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಆನಂದ ಕೆ ಅಸೈಗೋಳಿ ವಂದಿಸಿದರು.