ಭಾರತೀಯ ನೌಕಾ ಪಡೆಯ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ನಿನ್ನೆ ಸಣ್ಣ ಬೆಂಕಿ ಅವಘಡ ನಡೆಯಿತಾದರೂ ಗಮನಾರ್ಹ ‌ಹಾನಿಯೇನೂ ಆಗಲಿಲ್ಲ.

ಈ ವಿಮಾನ ವಾಹಕ ಯುದ್ಧ ನೌಕೆಯು ಕಾರವಾರ ಸಮೀಪ ಇರುವುದಾಗಿದೆ. ಸಿಬ್ಬಂದಿ ಕೋಣೆ ಬಳಿ ನಿನ್ನೆ ಸಂಜೆ ಬೆಂಕಿ ಕಾಣಿಸಿಕೊಂಡಾಗ ಕೂಡಲೆ ಅದನ್ನು ಆರಿಸಿ ಅವಘಡ ತಪ್ಪಿಸಲಾಯಿತು. ಒಳ ತನಿಖೆಗೆ‌ ಆದೇಶ ನೀಡಲಾಗಿದೆ.