ಚಿತ್ರದುರ್ಗ ತಾಲೂಕಿನ ಮುದ್ದಾಪುರದ ಮನೆಯೊಂದಕ್ಕೆ ಮುಂಜಾವದಲ್ಲಿ ಬಂದ ಚಿರತೆಯೊಂದು ಅಡುಗೆ ಮನೆಯ ಪಾತ್ರೆಗಳ ನಡುವೆ ಕೂತಿದೆ.
ಬೆಳಿಗ್ಗೆ ಐದೂಕಾಲು ಗಂಟೆಗೆ ಮನೆ ಹೊಕ್ಕ ಸಣ್ಣ ಚಿರತೆ ನೇರ ಅಡುಗೆ ಮನೆಗೆ ಹೋಗಿದೆ. ಐದೂವರೆಗೆ ಇದನ್ನು ಗಮನಿಸಿದ ಮನೆಯವರು ಬಾಗಿಲು ಹಾಕಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು.
ಹತ್ತು ಗಂಟೆಯ ಹೊತ್ತಿಗೆ ಆಗಮಿಸಿದ ಅರಣ್ಯ ರಕ್ಷಕರು ಬಲೆ ಬೀಸಿ ಚಿರತೆ ಹಿಡಿದು ಕುರುಚಲು ಗುಡ್ಡದಲ್ಲಿ ಬಿಟ್ಟರು ಎಂದು ತಿಳಿದುಬಂದಿದೆ.