ಮಂಥನ್, ಭೂಮಿಕಾ, ಚೌರಂಗಿ ಲೇನ್ ಮೊದಲಾದ ಚಿತ್ರಗಳ ಸಂಗೀತ ನಿರ್ದೇಶಕ ವನ್‌ರಾಜ್ ಭಾಟಿಯಾ ತೆಂಕಣ ಮುಂಬಯಿಯ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.

1988ರ ತಮಸ್ ಚಿತ್ರದಲ್ಲಿನ ಸಂಗೀತಕ್ಕೆ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. 1989ರಲ್ಲಿ ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. 2012ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದರು.