ದ.ಕ ಜಿಲ್ಲಾ ಕಾಂಗ್ರೆಸ್ ಕೋವಿಡ್ 19 ಹೆಲ್ಪ್‍ಲೈನ್ ಇದರ ಸಂಚಾಲಕರಾದ ಐವನ್ ಡಿ ಸೋಜರವರ ನೇತೃತ್ವದಲ್ಲಿ, ಜಪ್ಪು ಸೆಮಿನರಿ ಹಾಲಿನಲ್ಲಿ ರಕ್ತದಾನ ಶಿಬಿರ ಇಂದು ನಡೆಯಿತು. ಈ ಶಿಬಿರದ ಉದ್ಘಾಟನೆಯನ್ನು ಜಪ್ಪು ಚರ್ಚಿನ ಧರ್ಮಗುರುಗಳಾದ ರೆ.ಫಾ.ಕ್ಲಿಫರ್ಡ್ ರೋಡ್ರಿಗಸ್ ಹಾಗೂ ಎ.ಜೆ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜ್ ಇದರ ಪ್ರಸೂತಿ ಮತ್ತು ಗೈನೊಕೋಲೆಜಿಸ್ಟ್ ತಜ್ಞರಾದ ಡಾ.ಕವಿತಾ ಡಿ ಸೋಜ ಇವರು ನೆರವೇರಿಸಿದರು. ರಕ್ತ ಪ್ರತಿಯೊಬ್ಬರ ಜೀವ ಉಳಿಸಲು ಹೇಗೆ ಸಾಧ್ಯ ಮತ್ತು ರಕ್ತ  ನೀಡುವಿಕೆಯಿಂದ ಸಮಾಜಕ್ಕೆ ಆಗುವ ಲಾಭಂಶವನ್ನು ಡಾ.ಕವಿತಾ ಡಿ ಸೋಜರಿವರು ವಿವರಿಸಿದರು ಮತ್ತು ಜೀವ ಉಳಿಸಲು ಹೇಗೆ ಸಾಧ್ಯವಾಗುತ್ತದೆ ಎಂಬುವುದನ್ನು ವೈದ್ಯರಾಗಿ ತಿಳಿಸಿದರು. ಅಲ್ಲದೇ, ಕೋವಿಡ್ ಲಸಿಕೆ ಪಡೆಯುತ್ತಿರುವುದರಿಂದ ಕೋವಿಡ್ ರೋಗಾಣುಗಳನ್ನು ಎದುರಿಸಲು ಸಾಧ್ಯ ಎಂದು ನುಡಿದರು. ಈ ಸಂದರ್ಭದಲ್ಲಿ  ಮಾತನಾಡಿದ ರೆ.ಫಾ.ಕ್ಲಿಫರ್ಡ್ ರೋಡ್ರಿಗಸ್ ಇವರು, ರಕ್ತದಾನ ಜೀವನದಲ್ಲಿ ಮಾಡಬಹುದಾದ ಶ್ರೇಷ್ಠ ದಾನ, ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಇದಕ್ಕೆ ವಿಶೇಷ ಅರ್ಥವಿದೆ ಎಂದು ತಿಳಿಸಿದರು.

ಶಿಬಿರದ ಉದ್ಘಾಟನ ಕಾರ್ಯಕ್ರಮದಲ್ಲ್ಲಿ ಮಾಜಿ ಸಚಿವ ಶ್ರೀ ಯು.ಟಿ.ಖಾದರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹೊನ್ನಯ್ಯ, ಕಾರ್ಯದರ್ಶಿ ದುರ್ಗಾಪ್ರಸಾದ್, ಹೆಲ್ಪ್‍ಲೈನ್ ಸದಸ್ಯರುಗಳಾದ, ಕಾರ್ಪೊರೇಟರ್ ಗಳಾದ ಶಶಿಧರ ಹೆಗ್ಡೆ,  ನವೀನ್ ಡಿ ಸೋಜ, ಜೆಸಿಂತಾ ವಿಜಯ ಅಲ್ಫ್ರೆಡ್, ಮಾಜಿ  ಕಾರ್ಪೊರೇಟರ್ ಭಾಸ್ಕರ್ ರಾವ್, ಮಾಜಿ ಉಪಮೇಯರ್ ಮೊಹಮ್ಮದ್ ಕುಂಜತ್ತ್‍ಬೈಲ್, ನಾಗೇಂದ್ರ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ವಿರೋಧಪಕ್ಷ ನಾಯಕ ಎ.ಸಿ.ವಿನಯ್ ರಾಜ್, ಸತೀಶ್ ಪೆಂಗಳ್, ಮಾಜಿ ಮೇಯರ್ ಕೆ. ಅಶ್ರಫ್, ಯೂಸೂಫ್ ಉಚ್ಛಿಲ್, ಜೇಮ್ಸ್ ಪ್ರವೀಣ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಶಿತ್ ಪಿರೇರಾ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ದೀಕ್ಷಿತ್ ಸುವರ್ಣ, ಎಂ.ಪಿ.ಮನುರಾಜ್, ಆರೀಫ್ ಬಾವಾ, ಆಲಿಸ್ಟನ್ ಡಿ ಕುನ್ಹಾ,  ತೆರೆಜಾ ಪಿಂಟೋ, ವಿವೇಕ್ ರಾಜ್ ಪೂಜಾರಿ, ಮೊಹಮ್ಮದ್ ಮುಸ್ತಫ, ಶಶಿ ಪೂಜಾರಿ, ಆನಂದ್ ಸೋನ್ಸ್, ಅಬಿಬುಲ್ಲ ಮುಂತಾದವರು ಉಪಸ್ಥಿತರಿದ್ದರು.