ಎಫ್‌ಐಪಿಎ- ಅಮೆರಿಕದಲ್ಲಿರುವ ಭಾರತೀಯ ಶಸ್ತ್ರ ಚಿಕಿತ್ಸಕರ ಸಂಘವು ಭಾರತಕ್ಕೆ 5,000 ಆಕ್ಸಿಜನ್ ಕಾನ್ಸಂಟ್ರೇಶನ್‌ಗಳ ಮೊದಲ ಕಂತು ಕಳುಹಿಸಿದೆ.

ಸದರಿ ಶಸ್ತ್ರ ಚಿಕಿತ್ಸಕರ ಸಂಘವು ಶುಕ್ರವಾರವೇ 3,500 ಆಕ್ಸಿಜನ್ ಕಾನ್ಸಂಟ್ರೇಶನ್‌ಗಳನ್ನು ಖರೀದಿಸಿದೆ. ಅದರಲ್ಲಿ ಮೊದಲ ಕಂತು 450 ಆಕ್ಸಿಜನ್ ಕಾನ್ಸಂಟ್ರೇಶನ್‌ಗಳು ವಿಮಾನದಲ್ಲಿ ಅಹಮದಾಬಾದ್ ಬಂದು ಸೇರಿವೆ. ಇಂದು ಸಂಜೆ ಮುಂಬಯಿಗೆ 300 ಬಂದು ಸೇರುವವು.

ಎಫ್‌ಐಪಿಎ ಅಧ್ಯಕ್ಷ ಡಾ. ರಾಜ್ ಬಯಾನಿಯವರು ಕೋವಿಡ್ ಕಾಲದಲ್ಲಿ ಏನೇನು ಸಾಧ್ಯವೋ ಅಂಥ ನೆರವನ್ನು ತಾಯ್ನಾಡಿಗೆ ನೀಡಲು ನಮ್ಮ ಸಂಘ ಬದ್ಧವಾಗಿದೆ ಎಂದರು.