ಕಡಪ ಜಿಲ್ಲೆಯ ಮಾಮಿಲಪಲ್ಲಿ ಎಂಬ ಊರಿನ ಹೊರ ವಲಯದ ಕಲ್ಲು‌ ಕ್ವಾರಿಯಲ್ಲಿ ಕಲ್ಲು ಸೀಳಲು ಜಿಲೆಟನ್ ಇಳಿಸುವಾಗ ಈ ದುರಂತ ಸಂಭವಿಸಿದೆ.

ಕಲ್ಲಿನಲ್ಲಿ ತೂತು ಕೊರೆದು ಬಂಡೆ  ಸೀಳಲು‌ ಆ ತೂತಿನಲ್ಲಿ ಜಿಲೆಟಿನ್ ಕಡ್ಡಿ ಇಳಿಸುವಾಗ ಅದು ಸ್ಫೋಟಗೊಂಡಿದೆ; ಹತ್ತು ಜನರ ಬಲಿ ಪಡೆದಿದೆ. ಒಂದಿಬ್ಬರು ಗಾಯಗೊಂಡಿರುವುದಾಗಿಯೂ ಹೇಳಲಾಗಿದೆ.

ಆಂಧ್ರ ಮುಖ್ಯಮಂತ್ರಿ ವೈ. ಎಸ್. ಜಗನ್ಮೋಹನ ರೆಡ್ಡಿಯವರು ಕಡಪ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ, ದುರಂತದ ಮಾಹಿತಿ ಪಡೆದು, ಪರಿಹಾರಕ್ಕೆ ಸೂಚನೆ ‌ನೀಡಿದ್ದಾರೆ. ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕೆ. ಅನ್ಬುರಾಜನ್ ಇದು ಪರವಾನಗಿ ಪಡೆದ ಗಣಿ‌ ಎಂಬ ಮಾಹಿತಿ ನೀಡಿರುವರು.