ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ತಾಲೂಕಿನ ಪುತ್ತಿಗೆ ಪಳಕಳದ ಪಳಕಳ ಮಿತ್ರ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾರ್ಚ್ 16 ರಂದು ನಡೆಯಿತು. 

ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟಿಸಿದರು, ಮಂಡಳಿಯ ಕಾರ್ಯ ಸ್ತುತ್ಯಾರ್ಹವಾದುದು. ಇದೇ ರೀತಿ ಸಾರ್ವಜನಿಕರು ಒಂದಾಗಿ ತಮ್ಮ ಊರಿನ ಅಭಿವೃದ್ಧಿ ಮಾಡಿಕೊಂಡು ತಾವೂ ಅಭಿವೃದ್ಧಿ ಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿ ಬೆಳೆಯಬೇಕು ಎಂದು ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ 46 ನೇ ವರ್ಷದ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಮಂಗಲೋತ್ಸವ ನಡೆಯಿತು.