ರಶಿಯಾ ನಿರ್ಮಿತ ಯುದ್ಧ ನೌಕೆಯ ಹಸ್ತಾಂತರ ಪ್ರಕ್ರಿಯೆಯ ಮೊದಲ ಹಂತವಾಗಿ ಮಾಸ್ಕೋದಲ್ಲಿರುವ ಭಾರತದ ರಾಯಭಾರಿ ನೌಕೆಗೆ ಪೂಜೆ ನಡೆಸಿ ತುಶೀಲ್ ಎಂದು ಹೆಸರಿಟ್ಟರು.
2016ರಲ್ಲಿ ನಾಲ್ಕು ಯುದ್ಧ ನೌಕೆಗಳಿಗಾಗಿ ರಶಿಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2023ರೊಳಗೆ ಎರಡು ಯುದ್ಧ ನೌಕೆ ಪೂರೈಸಬೇಕಾಗಿದ್ದು, ಇದು ಮೊದಲನೆಯದಾಗಿದೆ.
ರಶಿಯಾದ ಕಲಿನಿಂಗ್ರಾದ್ ಬಂದರಿನ ಯಾಂತರ್ ನೌಕಾಂಗಣದಲ್ಲಿ ಈ ಪಿ135.6 ಯುದ್ಧ ನೌಕೆ ತಯಾರಾಗಿದೆ.