ಕೊರೋನಾ ಮೆಲ್ಲ ಆಟಗಾರರನ್ನು ಆಡಿಸತೊಡಗಿದ ಮೇಲೆ ಭಾರತೀಯ ಕ್ರಿಕೆಟ್ ‌ಮಂಡಳಿ ಎಚ್ಚೆತ್ತುಕೊಂಡು ಅನಿರ್ದಿಷ್ಟ ‌ಅವಧಿಗೆ ಐಪಿಎಲ್ ಮುಂದೂಡಿದೆ.

ಮೊದಲು ಕೊಲ್ಕತ್ತಾ, ಅನಂತರ ಹೈದರಾಬಾದ್, ಈಗ ‌ಚೆನ್ನೈ ಎಂದು ‌ಆಟಗಾರರನ್ನು ಕೋವಿಡ್ ‌ತಡವಿಕೊಂಡಿದೆ. ಎಲ್ಲ ಪಂದ್ಯಗಳನ್ನು ಮುಂಬಯಿಗೆ ವರ್ಗಾಯಿಸಲು ಆಲೋಚನೆ ಮಾಡಲಾಯಿತು. ಅಂತಿಮವಾಗಿ ಐಪಿಎಲ್ ‌ಪಂದ್ಯಾವಳಿ ಮುಂದೂಡುವ ನಿರ್ಧಾರವನ್ನು ಮಂಡಳಿ ಕೈಗೊಂಡಿತು.