ತುಳುನಾಡು, ನಮ್ಮ ರಾಜ್ಯ, ರಾಷ್ಟ್ರ ಮಾತ್ರವಲ್ಲ ಅಂತರಾಷ್ಟ್ರೀಯ  ಮಟ್ಟಕ್ಕೂ ವಿವಿಧ ರೀತಿಯ ಪ್ರತಿಭೆಗಳನ್ನು ನೀಡಿದೆ. ಇಂತಹ ಅನೇಕ ಪ್ರತಿಭೆಗಳಲ್ಲಿ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕರಾವಳಿಯ ಪ್ರತಿಭೆ ಬಾಲ ನಟ ಅಮನ್ ಎಸ್. ಕರ್ಕೇರ ಒಬ್ಬರು.

ಚಿತ್ರಕಲೆ, ಸಂಗೀತ, ನಟನೆ, ನಿರೂಪಣೆ, ನೃತ್ಯ, ಕೀಬೋರ್ಡ್, ಡ್ರಮ್, ಆಟೋಟ ಸ್ಪರ್ಧೆ ಹಾಗೂ ಚಿತ್ರರಂಗದಲ್ಲಿ ಮಿಂಚುತ್ತಿರುವ ಮಂಗಳೂರಿನ ಜಪ್ಪಿನ ಮೊಗೆರು ಪ್ರಸ್ಟೀಜ್ ಇಂಟರ್ ನೇಷನಲ್ ಶಾಲೆಯಲ್ಲಿ 8ನೇಯ ತರಗತಿಯಲ್ಲಿ ಓದುತ್ತಿರುವ ಈ ಬಾಲ ನಟ ತನ್ನ ಹತ್ತನೆಯ ಹರೆಯದಲ್ಲಿ ಸಿನೇಮಾ ರಂಗಕ್ಕೆ ಪ್ರವೇಶ ಮಾಡಿದ್ದು ಇತ್ತೀಚೆಗೆ ನ್ಯೂಯೋರ್ಕ್ ನಲ್ಲಿ ನಡೆಯುವ ಫಿಲಂ ಫೆಸ್ಟಿವೆಲ್ ಗೆ ನಮ್ಮ ದೇಶದಿಂದ ಆಯ್ಕೆಯಾದ ಎಲ್ಲಾ ಬಾಷೆಗಳ ಚಲನ ಚಿತ್ರಗಳಲ್ಲಿ ಅಮನ್ ಕರ್ಕೇರ ಬಾಲನಟನಾಗಿ ಅಭಿನಯಿಸಿದ ’ನೀಲಿ ಹಕ್ಕಿ’  ಚಿತ್ರದ  ಮೂಲಕ  "ಬೆಸ್ಟ್ ಚೈಲ್ಡ್ ಆಕ್ಟರ್" ಗೆ ನಾಮಿನೇಟ್ ಆಗಿದ್ದಾನೆ.

13 ರ ಹರೆಯದ ಈ ಬಾಲಕ ಈಗಾಗಲೇ  ನೀಲಿ ಹಕ್ಕಿ (ಸಿರ್ಸಿ ಭಾಷೆ) ಮಾತ್ರವಲ್ಲದೆ ರೂಪಾಂತರ (ಕನ್ನಡ),  ಕೇಕ್ (ಕನ್ನಡ),  ಸಪ್ತ ಸಾಗರದಾಚೆ ಎಲ್ಲೋ(ಕನ್ನಡ, ರಕ್ಷಿತ್ ಶೆಟ್ಟಿ ಜೊತೆ), ಜಿಷ್ಣು , ಪೆಪ್ಪೆರೆರೆ ಪೆರೆರೆರೆ, ಮೊದಲಾದ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ, ಅಲ್ಲದೆ ಕಾಮಿಡಿ ಶೋ , ಸ್ಟ್ಯಾಂಡರ್ಡ್ ಕಾಮಿಡಿ( ಫೈನಲ್ ಲಿಸ್ಟ್ ಸೆಲೆಕ್ಷನ್), ನಮ್ಮ ಟಿವಿಯಲ್ಲಿ ನಿರೂಪಣೆ

ಇಂಡಿಯಾ ಗಾಟ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು, ಸಂದೇಶ ರೇಡಿಯೋ ಕಾರ್ಯಕ್ರಮದಲ್ಲಿ ವಾಯ್ಸ್ ಕೊಡ್ತಾನೆ.

ನಂದಿನಿ ಕಷಾಯ , ಹೊಸ ಬೋಲೇರೋ ಕಾರು, ಆಯುರ್ವೇದಿಕ್ ಇಮ್ಯುನೋ ಕೇರ್ ಜಾಹೀರಾತಿನಲ್ಲಿ ಅಭಿನಯಿಸಿರುವನು. ಕಲಿಕೆಯಲ್ಲೂ ಸಾಧನೆ ಮಾಡುತ್ತಿರುವ ಈ ಬಾಲಕನಿಗೆ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿ ದೊರಕಿದೆ.

ಮಂಗಳೂರಿನ ಮೂಡುಶೆಡ್ಡೆಯವರಾದ ಉದ್ಯಮಿ ಶ್ರೀನಿವಾಸ ಅಮೀನ್ ಮತ್ತು ಶಿಕ್ಷಕಿ ಹಾಗೂ ಸನ್ಮಾರ್ಗ ದೂರದರ್ಶನದಲ್ಲಿ ನ್ಯೂಸ್ ರೀಡರ್ ಆಗಿರುವ ಬಬಿತಾ ಎಸ್ ಕರ್ಕೇರ ದಂಪತಿಯ ಸುಪುತ್ರ ಅಮನ್ ತುಳುನಾಡಿನ ಹೆಮ್ಮೆಯ ಸಾಧಕ. ಹಲವು ಟಿವಿ ವಾಹಿನಿಯಲ್ಲಿ ನಿರೂಪಕನಾಗಿ ಗಮನ ಸೆಳೆದಿರುವ ಈ ಬಾಲಕ ನಗರದ ಖ್ಯಾತ ವಾಗ್ಮಿ ದಯಾನಂದ ಕತ್ತಲ್ ಸಾರ್ ಇವರಿಂದ ಪ್ರಭಾವಿತನಾಗಿದ್ದಾನೆ.  ತನ್ನದೇ ಆದ ಯೂ ಟ್ಯೂಬ್ ಚೆನೆಲ್ ಮೂಲಕ ತನ್ನ ವಾಕ್ ಚಾತುರ್ಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದು ರಾಜ್ಯ ಮತ್ತು ರಾಷ್ಟ್ರ ಕರಾಟೆ ಟೂರ್ನ ಮೆಂಟ್ ನಲ್ಲಿ ಕಂಚು ಗೆದ್ದಿರುವನು.  ಸ್ಥಳೀಯ ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟೀಯ ಮಟ್ಟದ ಹೆಚ್ಚಿನ ಟಿವಿ ಚೆನೆಲ್ ಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಶನ,  ಸಂದರ್ಶನ ನೀಡಿ ಜನರ ಮೆಚ್ಚುಗೆಯನ್ನು ಪಡೆದ ಕೀರ್ತಿ ಈ ಬಾಲಕನಿಗೆ ಸಲ್ಲುತ್ತದೆ.

 ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಈ ಬಾಲ ಪ್ರತಿಭೆ ತನ್ನ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ಸ್ಮರಿಸುತ್ತಿದ್ದು, ತನ್ನ ಬಹುಮುಖ ಪ್ರತಿಭೆಯಿಂದ ಉತ್ತಮ ಭವಿಷ್ಯ ನಿರ್ಮಿಸುದರೊಂದಿಗೆ ನಾಡಿಗೂ ಕೀರ್ತಿ ತರುದರಲ್ಲಿ ಸಂದೇಹವಿಲ್ಲ.

- ಈಶ್ವರ ಎಂ. ಐಲ್