ಇರಾಕಿನ ನಾಸಿರಿಯಾ ನಗರದ ಅಲ್ ಹುಸೇನ್ ಟೀಚಿಂಗ್ ಆಸ್ಪತ್ರೆಯಲ್ಲಿ ರಾತ್ರಿ ನಡೆದ ಬೆಂಕಿ ಅವಘಡದಲ್ಲಿ 50ಕ್ಕೂ ಹೆಚ್ಚು ಜನ ಸಾವಿಗೀಡಾಗಿರುವುದಾಗಿ ಇರಾಕ್ ನಾಗರಿಕ ರಕ್ಷಣಾ ಇಲಾಖೆಯ ಮೇಜರ್ ಜನರಲ್ ಖಾಲಿದ್ ಬೊಹನ್ ತಿಳಿಸಿದ್ದಾರೆ.
70 ಬೆಡ್‌ಗಳ ಆಸ್ಪತ್ರೆಯಲ್ಲಿ 67 ಚಿಕಿತ್ಸೆ ಪಡೆಯುತ್ತಿದ್ದರು. ಬೆಂಕಿ ಅವಘಡಕ್ಕೆ ಮಿಂಚುರಿ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಒಂದು ಸುದ್ದಿ ಸಂಸ್ಥೆ ಹಾಗೂ ಆಮ್ಲಜನಕದ ಸಿಲಿಂಡರ್ ಸ್ಫೋಟ ಕಾರಣ ಎಂದು ಇನ್ನೊಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.