ಇಡೀ ಬಾಹ್ಯಾಕಾಶಕ್ಕೆ ಕಣ್ಣು ಇಟ್ಟಿರುವ ಯುಎಸ್‌ಎ ನಾಸಾದವರ ಜಗತ್ತಿನ ಅತಿ ದೊಡ್ಡ ಜೇಮ್ಸ್ ವೆಬ್ ದೂರದರ್ಶಕವು ಹುಟ್ಟುತ್ತಿರುವ ಹೊಸ ನೇಸರನ ಫೋಟೋ ಒಂದನ್ನು ತೆಗೆದು ಅಚ್ಚರಿ ಮೂಡಿಸಿದೆ.

1,000 ಬೆಳಕಿನ ವರುಷಗಳಷ್ಟು ದೂರದಲ್ಲಿ ಇರುವ ನಕ್ಷತ್ರ ಪುಂಜದಲ್ಲಿ ಈ ಹೊಸ ಸೂರ್ಯ ಇಲ್ಲವೇ ನಕ್ಷತ್ರ ಹುಟ್ಟುತ್ತಿದೆ. ದಹನ ಕ್ರಿಯೆ ನಡೆಸಿರುವ ಇದು ಸೂರ್ಯಾಕಾರ ಪಡೆಯಲು ಇನ್ನೂ ಕೆಲ ಕಾಲ ಬೇಕು. ಈಗ ಇದು ನಮ್ಮ ಸೂರ್ಯನ 8%ದಷ್ಟು ಮಾತ್ರ ಇದ್ದು ಪೂರ್ಣ ಬೆಳೆದಾಗ ದೊಡ್ಡದಾಗುವ ಪ್ರಮಾಣ ಈಗಲೇ ಊಹಿಸಲಾಗದು.