ಕಿನ್ನಿಗೋಳಿ: ಕಂಬಳವು ಕರಾವಳಿ ಭಾಗದ ಒಂದು ಅಚ್ಚುಮೆಚ್ಚಿನ ಜಾನಪದ ಕ್ರೀಡೆಯಾಗಿದ್ದು ಇದು ಜನರ ಜೀವನದ ಅಂಗವಾಗಿದೆ. ನಮ್ಮ ತುಳುನಾಡಿನ ಕೃಷಿ ಮತ್ತು ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಭಾಗವಾಗಿದ್ದು ಕಂಬಳದಿಂದ ನಮ್ಮ ಸಂಸ್ಕೃತಿ ಉಳಿಯುವುದರ ಜತೆಗೆ ಪ್ರಾಣಿ ಪ್ರೀತಿಯೂ ಹೆಚ್ಚಾಗುತ್ತದೆ. ಎಂದು ಆಧ್ಯಾತ್ಮ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಹೇಳಿದರು.

ಅವರು ಕಿನ್ನಿಗೋಳಿ ಸಮೀಪದ ಐಕಳದಲ್ಲಿ ನಡೆಯುವ ವಿಶಿಷ್ಟ ಹಾಗೂ ವೈಭೋವೋಪೇತ ಧಾರ್ಮಿಕ ಹಿನ್ನಲೆಯುಳ್ಳ, ತುಳುನಾಡ ಕಾರಣಿಕ  ಪುರುಷರಾದ ಐಕಳಬಾವ "ಕಾಂತಾಬಾರೆ-ಬೂದಾಬಾರೆ’ ಜೋಡುಕರೆ ನಾಮಾಂಕಿತ, ಇತಿಹಾಸ ಪ್ರಸಿದ್ಧ 47ನೇ ವರ್ಷ ಕಂಬಳದ ಕಾರ್ಯಕ್ರಮದಲ್ಲಿ  ಐಕಳ ಭಾವ ಗುತ್ತಿನ ಮನೆಯಲ್ಲಿ ಮತ್ತು ಕಂಬಳದ ಗದ್ದೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಿತ್ತು ಮತ್ತು ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಈ ವರ್ಷದ ಐಕಳಭಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬವು ಡಾ ದೇವಿ ಪ್ರಸಾದ್ ಶೆಟ್ಟಿ ಐಕ್ಕಳ ಬಾವ ಬೆಳಪು ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಐಕಳ ಬಾವ ಕುಟುಂಬಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಡಾ ಕೆ.ಪಿ.ಕೆ ಹೆಗ್ಡೆ ವಹಿಸಿದ್ದರು.

ವೇದಿಕೆಯಲ್ಲಿ ಕಟೀಲು ಕ್ಷೇತ್ರದ ಅರ್ಚಕ ಅನಂತ ಆಸ್ರಣ್ಣ, ಧರ್ಮ ಗುರುಗಳಾದ ವಂದನಯ ಫಾದರ್ ಓಜ್ವಾಲ್ಡ್ ಮೊಂತೆರೋ  ಪ್ರಧಾನ ಧರ್ಮ ಗುರುಗಳು ರಮ್ಮೇಧಿ ಅಮ್ಮನವರ ಇಗರ್ಜಿ ದಾಮಸ್ಕಟ್ಟೆ, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಕೃಷ್ಣಶೆಟ್ಟಿ ವೈ, ರತ್ನಾಕರ ಶೆಟ್ಟಿ,ಐಕಳ ಬಾವ ಯಜಮಾನರಾದ ದೋಗಣ್ಣ ಸಿ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ಐಕಳಭಾವ ದೇವಿ ಪ್ರಸಾದ್ ಶೆಟ್ಟಿ ,ರಜನಿ ಚಂದ್ರಶೇಖರ್ ಭಟ್, ರಾಹುಲ್ ಚಂದ್ರಶೇಖರ್, ಉದ್ಯಮಿ ರತ್ನಾಕರ ಶೆಟ್ಟಿ, ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಅರುಣ್ ರೈ ತೊಡಾರ್, ಶಾರದಮ್ಮ, ಮುರಳಿದಾರ್ ಮತ್ತಿತರರು ಉಪಸ್ಥಿತರಿದ್ದರು ಬಳಿಕ ಕಂಬಳ ಕ್ರೀಡಾಕೂಟ ನಡೆಯಿತು.