ಮಂಗಳೂರು:  ಪಣಂಬೂರಿನ ಕೆಐಓಸಿಎಲ್ ಉದ್ಯೋಗಿಯಾಗಿರುವ ಸುರೇಶ ಪಿ.ಟಿ. ಇವರು ಇತ್ತೀಚೆಗೆ ನಡೆದ ಮಂಗಳೂರು ಮ್ಯಾರಾಥಾನ್  5 ಕಿ.ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. 

ಬಹುಮಾನವಾಗಿ ಪಡೆದ ಮೊತ್ತವನ್ನು  ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ ವಿತರಿಸುವ ಸಂಕಲ್ಪ ಮಾಡಿರುವ ಇವರನ್ನು ಸಂಸ್ಥೆಯ ಸಿಬ್ಬಂದಿಗಳು ಶ್ಲಾಘಿಸಿ ಅಭಿನಂದಿಸಿದ್ದಾರೆ. ಇವರ ದಾನಪರತೆಗೆ ಸಾಮಾಜಿಕ ಕಾರ್ಯಕರ್ತರಾದ ಡಾ. ಅರವಿಂದ ಶ್ಯಾನಭಾಗರವರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.