ಈಗಾಗಲೇ ಮೋಟಾರು ವಾಹನ ಕಾಯ್ದೆಯಡಿ ಹಾರ್ನ್ ನಿಷೇಧ ಪ್ರದೇಶಗಳು ಎಂದು ಬೋರ್ಡ್ ಹೊತ್ತ ಸ್ಥಳಗಳು ಇವೆ. ಅವುಗಳ ಜೊತೆಗೆ ಮಂಗಳೂರಿನ ಆರು ಸ್ಥಳಗಳನ್ನು ಹಾರ್ನ್ ನಿಷೇಧಿತ ಪ್ರದೇಶ ಎಂದು ಜಿಲ್ಲಾಡಳಿತ ಮತ್ತು ಸಂಚಾರ ವ್ಯವಸ್ಥೆಯವರು ಘೋಷಿಸಿದ್ದಾರೆ.
ಲೇಡಿ ಘೋಷನ್ ಆಸ್ಪತ್ರೆಸುತ್ತ ಕೇಂದ್ರೀಯ ಮಾರುಕಟ್ಟೆವರೆಗೆ ಮತ್ತು ಆರ್ ಆರ್ ವೃತ್ತದವರೆಗೆ.
ಹಂಪನಕಟ್ಟೆ ಜಂಕ್ಷನ್‌ನಿಂದ ಮಿಲಾಗ್ರೀಸ್ ಚೌಕ, ವೆನ್‌ಲಾಕ್ ಆಸ್ಪತ್ರೆ, ರೈಲು ನಿಲ್ದಾಣದ ತನಕ.
ಅಂಬೇಡ್ಕರ್ ವೃತ್ತದಿಂದ ಬಲ್ಮಠ ಸರ್ಕಲ್, ಬಾವುಟ ಗುಡ್ಡೆ ಹಾಗೂ ಬಂಟ್ಸ್ ಹಾಸ್ಟೆಲ್ ತನಕ.
ಅತ್ತಾವರ ಕೆಎಂಸಿ ಸುತ್ತ ಹಾಗೂ ಬಿಶಪ್ ವಿಕ್ಟರ್ ನ್ಯೂ ರಸ್ತೆಯವರೆಗೆ.
ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯ 100 ಮೀಟರ್ ವ್ಯಾಪ್ತಿಯಲ್ಲಿ.
ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಯ 100 ಮೀಟರ್ ವ್ಯಾಪ್ತಿಯಲ್ಲಿ.
ಹಾರ್ನ್ ಮಾಡಿದರೆ ಸ್ಥಳದಲ್ಲೇ ರೂ. 1,000ದಿಂದ 2,000 ದಂಡ ವಿಧಿಸಲು ಅವಕಾಶ ಇದೆ.