ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದ್ರೆ: ದ.ಕ .ಜಿಲ್ಲಾ ಪಂ. ಶಾಲಾ ಶಿಕ್ಷಣ ಇಲಾಖೆ, ಮೂಡುಬಿದ್ರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕಡಂದಲೆ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆ ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟದ ಫಲಿತಾಂಶದ ವಿವರ
14 ವರ್ಷಕ್ಕಿಂತ ಕೆಳಗಿನ ಹುಡುಗಿಯರ ಕಬಡ್ಡಿ ಪಂದ್ಯಾಟದಲ್ಲಿ ಮೊದಲ ಸ್ಥಾನವನ್ನು ಕಡಂದಲೆ ಶಾಲೆ, ಎರಡನೇ ಸ್ಥಾನವನ್ನು ನೀರ್ಕೆರೆ ಶಾಲೆ ಪಡೆದಿರುತ್ತದೆ.
17 ವರ್ಷಕ್ಕಿಂತ ಕೆಳಗಿನ ವಯೋಮಾನದ ಹುಡುಗರ ಕಬಡ್ಡಿ ಪಂದ್ಯಾಟದಲ್ಲಿ ಮೊದಲ ಸ್ಥಾನವನ್ನು ಆಳ್ವಾಸ್ ಶಾಲೆ, ಎರಡನೇ ಸ್ಥಾನವನ್ನು ಕಡಂದಲೆ ಶಾಲೆ ಪಡೆದಿರುತ್ತದೆ.
17 ವರ್ಷಕ್ಕಿಂತ ಕೆಳಗಿನ ವಯೋಮಾನದ ಹುಡುಗಿಯರ ಕಬಡ್ಡಿ ಪಂದ್ಯಾಟದಲ್ಲಿ ಮೊದಲ ಸ್ಥಾನವನ್ನು ಅಳಿಯೂರು ಶಾಲೆ, ದ್ವಿತೀಯ ಸ್ಥಾನವನ್ನು ಕಲ್ಲಬೆಟ್ಟು ಶಾಲೆ ಪಡೆದಿರುತ್ತದೆ.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು, ಕ್ರೀಡಾ ಆಯೋಜಕರು, ಮುಖ್ಯ ಶಿಕ್ಷಕರು ಬಹುಮಾನಗಳನ್ನು ವಿತರಿಸಿದರು.