ನಂದಳಿಕೆಯ ಕವಿ ಮುದ್ದಣನ ಸಾಹಿತ್ಯ ವಿಶೇಷತೆಯನ್ನು ಜಾಹೀರುಪಡಿಸುವಲ್ಲಿ ದಿ|ನಂದಳಿಕೆ ಬಾಲಚಂದ್ರ ರಾಯರ ಶ್ರಮ ಶ್ಲಾಘನೀಯವಾದುದು. ಸಾಹಿತ್ಯ ಸಂಘಟನೆಯಲ್ಲೂ ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಅವರ ಸೇವೆ ನಿಜಕ್ಕೂ ಅನನ್ಯವಾಗಿತ್ತು.
ಓರ್ವ ಸಂಘಟಕರಾಗಿ, ಸಾಹಿತ್ಯ ಸಾಂಸ್ಕೃತಿಕ ಪರಿಚಾರಕರಾಗಿ, ಸ್ನೇಹಜೀವಿಯಾಗಿದ್ದ ಬಾಲಚಂದ್ರ ರಾಯರ ಅಗಲಿಕೆ ನಿಜಕ್ಕೂ ನೋವನ್ನುಂಟು ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸಂತಾಪ ವ್ಯಕ್ತಪಡಿಸಿದ್ದಾರೆ, ಬಾಲಚಂದ್ರ ರಾಯರಿಗೆ " ಕಲ್ಕೂರ ಪ್ರತಿಷ್ಠಾನದಿಂದ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಈ ಸಂದರ್ಭ ಕಲ್ಕೂರ ಸ್ಮರಿಸಿರುವರು.
ನಂದಳಿಕೆ ಬಾಲಚಂದ್ರ ರಾಯರ ಅಗಲಿಕೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಭುವನಭಿರಾಮ ಉಡುಪ, ಜನಾರ್ದನ ಹಂದೆ ಮತ್ತಿತರರು ಕಂಬನಿ ಮಿಡಿದಿರುವರು.
ನಾಳೆ ತಾ. 15, ಗುರುವಾರ ಬೆಳಿಗ್ಗೆ ಗಂಟೆ 6-00 ರಿಂದ 9-00 ರ ವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಮಂಗಳೂರಿನ ಬಿಜೈ ಜೈಲ್ ರೋಡ್ - ಬಿಜೈ ಚರ್ಚ್ ರೋಡ್ ನ ಪಿಂಟೋಸ್ ಲೇನ್ ನಲ್ಲಿರುವ ಅವರ ಸ್ವಗೃಹದಲ್ಲಿ ಇರಿಸಲಾಗುವುದು.