ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡಬಿದಿರೆ:  2024-25 ನೇ ಸಾಲಿನ‌ ಗ್ರೇಡ್ 10ರ ಸಿ ಬಿ ಎಸ್ಸ್ ಇ ಪರೀಕ್ಷೆಯಲ್ಲಿ ಹಾಜರಾದ ಎಲ್ಲಾ 38 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇಕಡ 1೦೦% ಫಲಿತಾಂಶ ರೋಟರಿ ಕೇಂದ್ರೀಯ ಶಾಲೆ ದಾಖಲಿಸಿದೆ.


ಆದ್ಯಾ ಜೈನ್ 462 (92.4%) ಮತ್ತು ಡಿ ಎಮ್ ಸ್ತುತಿ 462(92.4%)  ಅಂಕಗಳನ್ನು ಗಳಿಸಿ ಶಾಲಾ ಮಟ್ಟದಲ್ಲಿ  ಇಬ್ಬರೂ ಪ್ರಥಮ ಸ್ಥಾನವನ್ನೂ ಹಂಚಿಕೊಂಡಿರುತ್ತಾರೆ.

ಧೃತಿ ವಿನಯ್ ಮೋಯ್ಲಿ 453 (90.6%) ಎರಡನೇ ಸ್ಥಾನವನ್ನೂ, ಅಮಾಂಡಾ ಮೆಂಡಿಸ್ 449(89.8%) ತೃತೀಯ ಸ್ಥಾನವನ್ನು‌ ಗಳಿಸಿರುತ್ತಾರೆ.

ಉತ್ತಮ ಫಲಿತಾಂಶವನ್ನು ದಾಖಲಿಸಿರುವುದಕ್ಕೆ ಎಲ್ಲಾ ವಿದ್ಯಾರ್ಥಿಗಳನ್ನು, ಸಂಸ್ಥೆಯ ಪ್ರಾಂಶುಪಾಲರನ್ನು ಹಾಗೂ ಶಿಕ್ಷಕ ವೃಂದದವರನ್ನು ಶಾಲಾ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷರಾದ ರೋ. ನಾರಾಯಣ ಪಿ ಎಮ್, ಕಾರ್ಯದರ್ಶಿ ರೋ ಅನಂತಕೃಷ್ಣ ರಾವ್ ಮತ್ತು ಸಂಚಾಲಕರಾದ ರೋ.ಜೆ ಡ್ಬ್ಲೂ. ಪಿಂಟೋ ರವರು ಅಭಿನಂದಿಸಿರುತ್ತಾರೆ.