ಕಾರ್ಕಳ: ನಿರಂತರವಾದ ಕಲಿಕೆ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಆದುನಿಕ ಯುಗದ ಕಲಿಕೆಯಲ್ಲಿ ತಾoತ್ರಿಕತೆ ಅತ್ಯಗತ್ಯ. ಕಲಿಕೆ ಹಾಗೂ ಕೆಲಸದಲ್ಲಿ ಅಭಿರುಚಿ, ಉತ್ಸಾಹ, ಉತ್ಸುಕತೆ, ಹೊಸತನ  ಹಾಗೂ ಸಂಶೋಧನೆ ಸಾಮರ್ಥ್ಯವನ್ನು ಬೆಳೆಸಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ನಾವು ಜೀವನದಲ್ಲಿ ಮಾತ್ರವಲ್ಲ ಕೆಲಸ ಹಾಗೂ ಉದ್ದಿಮೆಯಲ್ಲಿ ಯಶಸ್ವಿ ಪಾಲುದಾರರಾಗಬಹುದು ಎಂದು ಕಿಂಡ್ರೆಲ್ ಗ್ಲೋಬಲ್ ಡೆಲಿವರಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮಿಶೆಲ್ ಮೋಸ್‌ಮನ್ ನುಡಿದರು.

ಅವರು ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇನ್ನೋವೇಶನ್ 2025_ - ಕೋಡ್ 4 ಭಾರತ್: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಎ ಐ ತಂತ್ರಜ್ಞಾನ ಕೇವಲ ಒಂದು ತಂತ್ರಜ್ಞಾನವಲ್ಲ ಹೊಸತನ, ವಿಶೇಷವಾದ ಅವಕಾಶಗಳನ್ನು ಕಲ್ಪಿಸುವ ಸ್ವಂತಿಕೆಯನ್ನು ಅಭಿವೃದ್ಧಿ ಗೊಳಿಸುವ ಹಾಗೂ ಎಲ್ಲರನ್ನು ಒಟ್ಟೋಟ್ಟಿಗೆ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಒಂದು ರಹದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕಿಂಡ್ರೆಲ್ ಸಂಸ್ಥೆಯ ನಿರ್ದೇಶಕ ಡಾ. ರಾಜಮೋಹನ್ ಸಿ, ಮುಂದಿನ ದಿನಗಳಲ್ಲಿ ಮೈಕ್ರೋಸಾಫ್ಟ್ನ ನಾಯಕತ್ವ ತಂಡಗಳಿಂದ ಮುಖ್ಯ ಭಾಷಣಗಳು, ಉತ್ತಮ ಮಾಹಿತಿಯನ್ನೊಳಗೊಂಡ ಪ್ಯಾನಲ್ ಚರ್ಚೆಗಳು ಮತ್ತು ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾದ ಸೆಲ್ಫ್ ಪೇಸ್ಡ್ ಕಲಿಕೆಯ ಯೋಜನೆಯನ್ನು ಪರಿಚಯಿಸುವುದು ಮುಖ್ಯ ಉದ್ದೇಶವಾಗಿದೆ.

ಈ ಕಾರ್ಯಕ್ರಮವು 24 ಗಂಟೆಗಳ ಪ್ರಾದೇಶಿಕ ಹ್ಯಾಕಥಾನ್ ಆಗಿದ್ದು ಮಂಗಳೂರು ಮತ್ತು ಉಡುಪಿಯ ಎಂಜಿನಿಯರಿಂಗ್ ಮತ್ತು ಪದವಿ ಕಾಲೇಜುಗಳ (ಬಿಇ / ಬಿಟೆಕ್, ಎಂ ಟೆಕ್, ಬಿ ಎಸ್ಸಿ, ಬಿಸಿಎ) ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊoಡು ಹ್ಯಾಕಥಾನ್ ನ್ನು ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ನಡೆಸಲಾಗುವುದು,  ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ನೈಜ-ಪ್ರಪಂಚದ ಸವಾಲುಗಳನ್ನು ಎದುರಿಸಲು ಮಹತ್ವಾಕಾಂಕ್ಷಿ ನಾವೀನ್ಯಕಾರರಿಗೆ ಸಂವಾದಾತ್ಮಕ ವೇದಿಕೆ ಒದಗಿಸುವುದು.   ಡಿಜಿಟಲ್ ಟ್ರಾನ್ಸ್ಫಾರ್ಮೇಶನ್ ನ್ನು ಹೆಚ್ಚಿಸಲು ಶೈಕ್ಷಣಿಕ ಮತ್ತು ಉದ್ಯಮವು ಸಹಕರಿಸುವ ದೃಢವಾದ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಇನ್ಕ್ಯುಬೇಶನ್ ಅಭಿವೃದ್ಧಿ, ಶೈಕ್ಷಣಿಕ ಯೋಜನಾ ಬೆಂಬಲ ಮತ್ತು ಕಾಲೇಜು ಕೋಡಿಂಗ್ ಕ್ಲಬ್ಗಳನ್ನು ಬಲಪಡಿಸುವ ಫಲಿತಾಂಶಗಳನ್ನು ಈ ಕಾರ್ಯಕ್ರಮದಿಂದ ನಿರೀಕ್ಷಿಸಲಾಗುತ್ತಿದ್ದು ಅದರೊಂದಿಗೆ ಉದ್ಯಮಶೀಲತೆಯ ಆಲೋಚನೆಗಳನ್ನು ಪೋಷಿಸುತ್ತದೆ.  ಈ  ಕರ್ಟನ್ ರೈಸರ್ ಕಾರ್ಯಕ್ರಮವು ಹ್ಯಾಕಥಾನ್ ಗೆ ಮುನ್ನುಡಿ ಎಂಬುದಕ್ಕಿಂತ ಹೆಚ್ಚಾಗಿ ಶೈಕ್ಷಣಿಕ-ಉದ್ಯಮ ಸಹಯೋಗ, ಕೌಶಲ್ಯ ಅಭಿವೃದ್ಧಿ ಮತ್ತು ನಾವೀನ್ಯತೆ-ಚಾಲಿತ ಕಲಿಕೆಗೆ ವೇಗವರ್ಧಕವಾಗಿ ಪರಿಣಮಿಸಲಿದೆ ಎಂದರು.

ಜಾಗತಿಕ ತಂತ್ರಜ್ಞಾನದ ನಾಯಕರಾದ ಕಿಂಡ್ರೆಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮಕ್ಕೆ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಹಿರಿಯ ಶಿಕ್ಷಣ ತಜ್ಞರು, ಉದ್ಯಮದ ಮುಖಂಡರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳನ್ನು ಭಾಗವಹಿಸಿ ಮುಂಬರುವ ಮೆಗಾ ಹ್ಯಾಕಥಾನ್ ನ ದೃಷ್ಟಿ, ಪ್ರಮುಖ ವಿಷಯಗಳು ಮತ್ತು ಕಾರ್ಯತಂತ್ರದ ಮಾರ್ಗಸೂಚಿಯನ್ನು ಅನಾವರಣಗೊಳಿಸಲಾಯಿತು.  ಪ್ರಮುಖವಾಗಿ ಕಿಂಡ್ರೆಲ್ ಮತ್ತು  ಕಾರ್ಯನಿರ್ವಹಿಸಲಿದೆ ಎಂದರು.

ಮೈಕ್ರೋಸಾಫ್ಟ್ ಕಂಪೆನಿಯ  ಟೆಕ್ನಿಕಲ್ ಟ್ರೈನರ್ ಕನ್ಸಲ್ಟೆಂಟ್ ಮಾನ್ಸೂನ್ ಆಚಾರ್ಯ ಮಾತನಾಡಿ ಕಾರ್ಯಕ್ರಮದ ಉದ್ದೇಶ, ಅವಶ್ಯಕತೆ, ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು,

ಈ ಸಂದರ್ಭದಲ್ಲಿ ವೆಲೋಸೆಸ್ ಕನ್ಸಲ್ಟಿಂಗ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಹಾಗೂ  ನಿರ್ದೇಶಕ ಶಂಕರನ್ ಚೆಟ್ಟೂರ್, ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿ ತಾಂತ್ರಿಕ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ, ಎನ್‌ಎಂ‌ಎಎಂ‌ಐಟಿ  ಉಪಪ್ರಾಂಶುಪಾಲ ಡಾ. ನಾಗೇಶ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎನ್‌ಎಂ‌ಎಎಂ‌ಐಟಿ  ಪ್ರಾಂಶುಪಾಲ ಡಾ. ಎನ್. ನಿರಂಜನ್  ಚಿಪ್ಲುಂಕರ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಡಾ. ಗ್ರೈನಲ್ ಮತ್ತು ಶ್ವೇತಾ ಭರತ್ ಕಾರ್ಯಕ್ರಮ ನಿರೂಪಿಸಿ ಡಾ. ಶಶಾಂಕ್ ಶೆಟ್ಟಿ, ಹ್ಯಾಕಥಾನ್ ಸಂಯೋಜಕರು ಸ್ವಾಗತಿಸಿದರು.

ಸಲಹಾ, ಕಲ್ಯಾಣ, ತರಬೇತಿ ಮತ್ತು ಪ್ಲೇಸ್ಮೆಂಟ್ ವಿಭಾಗ ಮುಖ್ಯಸ್ಥ ಭರತ್ ಕುಮಾರ್ ಜಿ, ವಂದಿಸಿದರು.