ಕಾರ್ಕಳ: ಕಾರ್ಕಳ ಬಂಗ್ಲೆಗುಡ್ಡೆ ಶ್ರೀದೇವಿ ಕಾಲೋನಿಯಲ್ಲಿ ಶ್ರೀದೇವಿ ಫ್ರೆಂಡ್ಸ್ ಕ್ಲಬ್ (ರಿ) ವತಿಯಿಂದ 79ನೇ ಸ್ವಾತಂತ್ರೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಕಳ ಪುರಸಭೆ ವಿಪಕ್ಷ ನಾಯಕ ಅಷ್ಪಾಕ್ ಅಹ್ಮದ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಪ್ರತಿಮಾ ರಾಣೆ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಮಾಜಿ ಪುರಸಭೆ ಸದಸ್ಯೆ ಪ್ಯಾರಿ ಪರ್ವೀನ್, ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ವಿಜಯ, ಮಾಜಿ ಅಧ್ಯಕ್ಷ ರಮೇಶ್, ಮಾಜಿ ಉಪಾಧ್ಯಕ್ಷ ಪ್ರಶಾಂತ್, ನಿಖಿಲ್, ಉಪಸ್ಥಿತರಿದ್ದರು.