ಕಾರ್ಕಳ:  ಡಿಸೆಂಬರ್  03 ರಂದು  ವಕೀಲರ ಸಂಘ ಕಾರ್ಕಳ ಇದರ ವತಿಯಿಂದ ವಕೀಲರ ದಿನಾಚರಣೆ ಅಂಗವಾಗಿ ನ್ಯಾಯಾಲಯದ ಆವರಣದಲ್ಲಿ ಕೆ. ಎಮ್. ಸಿ. ಆಸ್ಪತ್ರೆ ಕಾರ್ಕಳ ಇವರಿಂದ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ಅರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಶಿಬಿರವನ್ನು ಹಿರಿಯ ಸಿವಿಲ್ ನ್ಯಾಯಾದೀಷೆ ಶರ್ಮಿಳಾ ಸಿ. ಎಸ್. ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. 

ಪ್ರಧಾನ ಸಿವಿಲ್ ನ್ಯಾಯಾದೀಷೆ ಕೋಮಲ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾದೀಶಾರದ ಗೀತಾ ಹಾಗೂ ಕೆ. ಎಮ್. ಸಿ. ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸುದೀಪ್ ಪಡಿವಾಳ್, ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್, ಕಾರ್ಯದರ್ಶಿ ಪದ್ಮ ಪ್ರಸಾದ್ ಜೈನ್. ಎನ್ ಹಾಗೂ ಉಪಾಧ್ಯಕ್ಷ ಕೆ. ಹರೀಶ್ ಅಧಿಕಾರಿ ಉಪಸ್ಥಿತರಿದ್ದರು.