ಕಾರ್ಕಳ: ಮಣಿಪಾಲ ಕಸ್ತುರ್ಬಾ ಆಸ್ಪತ್ರೆ ವತಿಯಿಂದ ಕಾರ್ಕಳ ವಲಯದ ಪತ್ರಕರ್ತರಿಗೆ ಪತ್ರಕರ್ತರ ಭವನದಲ್ಲಿ ನವೆಂಬರ್ 8 ಶನಿವಾರ ದಂದು ಉಚಿತ ಆರೋಗ್ಯ ಕಾರ್ಡ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಲಯದ ಅಧ್ಯಕ್ಷರಾದ ಮೊಹಮ್ಮದ್ ಶರೀಫ್ ಮಣಿಪಾಲ ಆಸ್ಪತ್ರೆಯವರು ಮೊಟ್ಟ ಮೊದಲ ಬಾರಿ ಆರೋಗ್ಯ ಕಾರ್ಡ್ಗಳನ್ನು ಕಾರ್ಕಳದ ಪತ್ರಕರ್ತರಿಗೆ ವಿತರಿಸಿದರು. ಇಂದು ಉಭಯ ಜಿಲ್ಲೆಗಳ ಎಲ್ಲಾ ಪತ್ರಕರ್ತರಿಗೂ ಆರೋಗ್ಯ ಕಾರ್ಡ್ ವಿತರಿಸುತ್ತಿದ್ದಾರೆ.  ಇ  ಆರೋಗ್ಯ ಕಾರ್ಡ್ ಯಾರಿಗೂ ಉಪಯೋಗ ಬಾರದೆ ಇರಲಿ  ಹಾಗೂ  ಮಣಿಪಾಲ್ ಆಸ್ಪತ್ರೆಯವರು ನಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.

ನಂತರ ಮಾತನಾಡಿದ ಮಣಿಪಾಲ್ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮ್ಯಾನೇಜರ್ ಹಾಗೂ ಮಾಧ್ಯಮ ವಕ್ತಾರ ಮೋಹನ್ ಶೆಟ್ಟಿ ಮಾತನಾಡಿದ ಅವರು ಎಲ್ಲ ಪತ್ರಕರ್ತರು ಸಾರ್ವಜನಿಕ ಜೀವನದಲ್ಲಿ ದುಡಿಯುವವರು ನಿಮ್ಮ ವೃತ್ತಿ  ಜೀವನದಲ್ಲಿ ನಿಮಗೆ ಆರೋಗ್ಯದ ಸಮಸ್ಯೆ ಬಂದಾಗ ನಾವು ಕೊಟ್ಟಿರುವ ಆರೋಗ್ಯ ಕಾರ್ಡ್ ಗಳಿಂದ ನಿಮಗೆ ರಿಯಾಯಿತಿ ದರದಲ್ಲಿ ಹಾಗೂ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನಮ್ಮ ಆಸ್ಪತ್ರೆಯಲ್ಲಿ ಪಡಕೊಳ್ಳಬಹುದೆಂದು ಹೇಳಿದರು. 

ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಉದಯಕುಮಾರ್, ಕಾರ್ಕಳ ತಾಲೂಕು ಪತ್ರಕರ್ತರ ಕಾರ್ಯದರ್ಶಿ ಹರೀಶ್ ಆಚಾರ್ಯ,  ಹಾಗೂ ಮಣಿಪಾಲ ಆಸ್ಪತ್ರೆಯ ಪ್ರತಿನಿಧಿ ಸಂದೀಪ್, ಕಾರ್ಕಳ ರಾಟರಿ ಆಸ್ಪತ್ರೆಯ ಸಹ ವ್ಯವಸ್ಥಾಪಕ ಆಶ್ಲೇಷ್ ಅಲ್ಮೆಡ, ಹಾಗೂ ಕಾರ್ಕಳದ ಪ್ರತಿನಿಧಿ ನಾರಾಯಣ್ ನಾಯಕ್ ಉಪಸ್ಥಿತರಿದ್ದರು.