ಕಾರ್ಕಳ: ರೋಟರಿ ಕ್ಲಬ್ ಕಾರ್ಕಳದಲ್ಲಿ ವರ್ಲ್ಡ್ ಅಲ್ಜೈಮರ್ಸ್ ಡೇ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು.  ಈ ಸಂದರ್ಭದಲ್ಲಿ ಪ್ರಸಿದ್ಧ ನರರೋಗ ತಜ್ಞರಾದ ಡಾ. ಅಭಿರಾಮ್ ಪಿ. ಯನ್ ಅವರು “ಅಲ್ಜೈಮರ್ಸ್ ರೋಗ ಲಕ್ಷಣಗಳು, ತಡೆ ಹಾಗೂ ಆರೈಕೆ” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಡಾ. ಅಭಿರಾಮ್ ಅವರು ಮಾತನಾಡುತ್ತಾ – “ಅಲ್ಜೈಮರ್ಸ್ ಒಂದು ಸ್ಮೃತಿ ಕಳೆದುಕೊಳ್ಳುವ ನರರೋಗ. ವಯೋವೃದ್ಧರಲ್ಲಿ ಹೆಚ್ಚು ಕಾಣಿಸಿಕೊಂಡರೂ, ಸಮಯಕ್ಕೆ ಸರಿಯಾಗಿ ಗಮನ ಹರಿಸಿದರೆ ಜೀವನಮಟ್ಟ ಸುಧಾರಿಸಬಹುದು. ಕುಟುಂಬದವರ ಸಹಾನುಭೂತಿ ಮತ್ತು ಆರೈಕೆ ಅತ್ಯಂತ ಮುಖ್ಯ” ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಅಧ್ಯಕ್ಷ  ಕೆ. ನವೀನ್ ಚಂದ್ರ ಶೆಟ್ಟಿ ಉದ್ಘಾಟಿಸಿ ಸ್ವಾಗತಿಸಿದರು . ಕಾರ್ಯದರ್ಶಿ ಚೇತನ್ ನಾಯಕ್  ವಂದಿಸಿದರು . 

ರೋಟರಿ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಕೊನೆಯಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.