ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಿಂಗಾರ ಸುರತ್ಕಲ್ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜ್ ಚೇಲೈರು ಸಹಬಾಗಿತ್ವದಲ್ಲಿ ನಡೆದ ನಲ್ಮೆ ಬಲ್ಮೆ. ವಿದ್ಯಾರ್ಥಿಗಳಿಗಾಗಿ ಮೂರು ದಿನದ ರಂಗ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ರಂಗ ಪ್ರದರ್ಶನದೊಂದಿಗೆ ನಡೆಯಿತು.

ಮುಖ್ಯ ಅತಿಥಿ  ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಮಾತನಾಡಿ ಗ್ರಾಮೀಣ ಪ್ರದೇಶ ದ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಪ್ರತಿಭೆಯಿದ್ದು ಅದರ ಅಭಿವ್ಯಕ್ತಿಗೆ ರಂಗ ತರಬೇತಿ ಉತ್ತಮ ಅವಕಾಶ ಎಂದರು.

ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕೆ. ರಾಜಮೋಹನ ರಾವ್ ಮಾತನಾಡಿ ಪಠ್ಯ ಪೂರಕ ಚಟುವಟಿಕೆಗಳಲ್ಲಿ ಕ್ರಿಯಾ ಶೀಲ ರಾಗಿ ರುವ ವಿದ್ಯಾರ್ಥಿಗಳು ಕಲಿಕೆ ಯಲ್ಲಿ ಮುಂದೆ ಇರುತ್ತಾರೆ ಎಂದರು.

ಎಂ ಆರ್. ಪಿ. ಎಲ್. ಸಂಸ್ಥೆಯ ನಿವೃತ್ತ ಪ್ರಬಂಧಕಿ ಹಾಗು ಲೇಖಕಿ ವೀಣಾ ಶೆಟ್ಟಿ ಯವರು ನಲ್ಮೆ ಬಲ್ಮೆ ಯಂತಹ ತರಬೇತಿ ಕಾರ್ಯಕ್ರಮ ಗಳಿಂದ ಸುಪ್ತವಾಗಿರುವ ಪ್ರತಿಭೆ ಗಳು ಪ್ರಕಟವಾಗಲು ಸಾಧ್ಯ.. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸಿಂಗಾರ ಸಂಸ್ಥೆ ಯ ಯೋಜನೆ ಪ್ರಯೋಜನಕಾರಿಯಾಗಿದೆ ಎಂದರು. 

ಶಕ್ತಿನಗರ ನಾಲ್ಯ ಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಯಾನಂದ ಸುವರ್ಣ ಮಾತನಾಡಿ ಔದ್ಯೋಗಿಕ ಲೋಕದಲ್ಲಿ ಇಂದು ಸಮರ್ಥವಾಗಿ ಸಂವಹನ ಕಲೆ ಅಗತ್ಯವಾಗಿದ್ದು ರಂಗ ಭೂಮಿ ಪೂರಕವಾಗಿರುತ್ತದೆ ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಚಂದ್ರಶೇಖರ್ ಹೆಬ್ಬಾರ್ ಮಾತೃ ಭಾಷೆಯ ಕುರಿತು ಪ್ರೀತಿ ಅಗತ್ಯವಾಗಿದ್ದು ತುಳು ಭಾಷೆ ಮತ್ತು ಸಂಸ್ಕೃತಿ ಯ ಅರಿವು ವಿದ್ಯಾರ್ಥಿಗಳಲ್ಲಿ ಇರಬೇಕು ಎಂದರು.

ಸಿಂಗಾರ ಸುರತ್ಕಲ್ ಕಾರ್ಯದರ್ಶಿ ಕೃಷ್ಣ ಮೂರ್ತಿ ಮಾತನಾಡಿ ಗ್ರಾಮೀಣ ಪ್ರದೇಶ ದ ಕಾಲೇಜು ಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು ಲಭ್ಯವಾಗಿಸುವ ಪ್ರಯತ್ನ ಇದಾಗಿದ್ದು ವಿದ್ಯಾರ್ಥಿಗಳಲ್ಲಿ ಆತ್ಮ ಗೌರವ ದ ಭಾವ ಮೂಡಿದೆ ಎಂದು ನುಡಿದರು.

ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್  ಅವರು ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿ ಇದ್ದು ಹಿರಿಯರ ಜ್ಞಾನ ಪರಂಪರೆ ಉಳಿಸಿ ಕೊಳ್ಳುವ ಅಗತ್ಯ ವಿದೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಲೈರು  ಮಾತನಾಡಿ ಶಿಬಿರ ವಿದ್ಯಾರ್ಥಿಗಳ ಮನೋವೃತ್ತಿ ಯಲ್ಲಿ ಬದಲಾವಣೆ  ತಂದಿದ್ದು ಅವಕಾಶ ಕಲ್ಪಿಸಿದ ಅಕಾಡೆಮಿ ಮತ್ತು ಸಿಂಗಾರ ಸಂಸ್ಥೆಗಳ ಕಾರ್ಯ  ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಮತ್ತು ಅವನೀಶ್ ಅವರನ್ನು ಗೌರವಿಸ ಲಾಯಿತು.

   ವಿದ್ಯಾರ್ಥಿನಿ ದೀಕ್ಷಾ ಸ್ವಾಗತಿಸಿ ದರು. ರಕ್ಷಿತಾ ವಂದಿಸಿದರು.

ಗೌತಮಿ, ಪ್ರಜ್ವಲ್, ಅಕ್ಷತಾ ಅನುಭವ ಹಂಚಿ ಕೊಂಡರು.

ಉಪನ್ಯಾಸಕಿ ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು.

ಉಪನ್ಯಾಸಕರಾದ ರವಿಚಂದ್ರ, ಜಯಶ್ರೀ, ತ್ರಿವೇಣಿ ಮತ್ತಿತರರು ಉಪಸ್ಥಿತರಿದ್ದರು.