ಕಾರ್ಕಳ: ಯಕ್ಷರಂಗಾಯಣ ಕಾರ್ಕಳ ಇದರ ನೂತನ ನಿರ್ದೇಶಕರಾಗಿ ಬಿ.ಆರ್.ವೆಂಕಟರಮಣ ಐತಾಳ್ ರವರು ಇಂದು ಅಧಿಕಾರ ಸ್ವೀಕರಿಸಿದರು
ಈ ಸಂದರ್ಭದಲ್ಲಿ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ನಿಕಟ ಪೂರ್ವ ಯಕ್ಷರಂಗಾಯಣದ ನಿರ್ದೇಶಕ ಜೀವರಾಮ್ ಸುಳ್ಯ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್ ಕೋಟ್ಯಾನ್, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಸದಸ್ಯರಾದ ನಾಗೇಶ್ ಉದ್ಯಾವರ, ಸಂತೋಷ್ ಹಿರಿಯಡ್ಕ, ರಂಗಕರ್ಮಿಗಳಾದ ಬಾಸುಮ ಕೊಡಗು, ಸುಕುಮಾರ್ ಮುದ್ರಾಡಿ, ಕಾವ್ಯವಾಣಿ, ರಾಜು ಮಣಿಪಾಲ, ಚಂದ್ರನಾಥ ಬಜಗೋಳಿ, ಸಂದೇಶ್, ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಸದಸ್ಯರಾದ ಭರತ್, ಪದ್ಮಪ್ರಸಾದ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.