ಉಡುಪಿ:  ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಉಡುಪಿ ನಗರಸಭೆ, ಮಲ್ಪೆ ಅಭಿವೃದ್ಧಿ ಸಮಿತಿ, ನಾರಾಯಣ ಗುರು ಆಂಗ್ಲ ಮಾದ್ಯಮ ಶಾಲೆ, ವಿದ್ಯೋದಯ ಶಾಲೆಯ ಸ್ಕೌಟ್ಸ್ ಗೈಡ್ಸ್ ಮಕ್ಕಳು, ಮಲ್ಪೆ ರಾಜ್ ಫಿಶ್ ಮಿಲ್‍ನ ಸಿಬ್ಬಂದಿಗಳು ಹಾಗೂ ನಗರಸಭೆಯ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳು ಮಲ್ಪೆ ಬೀಚ್‍ನಲ್ಲಿ ಸ್ವಚ್ಛ ಕಡಲ ಕಿನಾರೆ ಕಾರ್ಯಕ್ರಮದ ಅಂಗವಾಗಿ ಶ್ರಮದಾನ ನಡೆಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ರಾಯಪ್ಪ, ನಗರಸಭೆಯ ಸದಸ್ಯರಾದ ಲಕ್ಷ್ಮೀ ಮಂಜುನಾಥ್, ಮಲ್ಪೆ ಅಭಿವೃದ್ಧಿ ಸಮಿತಿಯ ಸಂತೋಷ್ ಪೈ, ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹ ಕೆ.ಎಸ್, ಆರೋಗ್ಯ ನಿರೀಕ್ಷಕರು, ಸೂಪರ್ ವೈಸರ್‍ಗಳು, ಪೌರಕಾರ್ಮಿಕರು, ಸ್ಕೌಟ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.