ಕಿನ್ನಿಗೋಳಿ: ಕೊಸೆಸಾಂವ್ ಅಮ್ಮನವರ ಧರ್ಮ ಕೇಂದ್ರ ಇದರ ವತಿಯಿಂದ ಬಾಂಧುತ್ವ ಕ್ರಿಸ್ಮಸ್ ಕಾರ್ಯಕ್ರಮವನ್ನು 1-1-2023 ರಂದು ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ವಂದನೆಯ ಧರ್ಮ ಗುರುಗಳಾದ ಫಾ. ಫಾವುಸ್ತಿನ್ ಲೂಕಸ್ ಲೋಬೊ ಧರ್ಮ ಗುರುಗಳು ಕಿನ್ನಿಗೋಳಿ. ನಾವು ಯಾವಾಗ ಎಲ್ಲರೊಡನೆ ಸೇರಿ ಒಗ್ಗಟ್ಟಿನಲ್ಲಿ ಇರುತ್ತೇವೆ, ಆವಾಗ ಈ ಭಾಂಧತ್ವಕ್ಕೆ ಒಳ್ಳೆಯ ಅರ್ಥ ಬರುತ್ತದೆ. ನಾವು ನಮ್ಮ ಧರ್ಮವು ಎಷ್ಟು ಪ್ರೀತಿಸುತ್ತೇವೆ ಅಷ್ಟೇ ಇನ್ನೊಬ್ಬರ ಧರ್ಮವನ್ನು ಗೌರವಿಸಬೇಕು, ನಾವು ನಮ್ಮ ಧರ್ಮದಲ್ಲಿ ಆಗುವ ಆಚರಣೆ ಅಂತರ್ಧರ್ಮಿಯವಾಗಿ ಆಚರಿಸಿ ಬಾಂದತ್ವ ಇನ್ನಷ್ಟು ಬೆಳೆಸುವ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅನಂತ ಪದ್ಮನಾಭ ಅಸ್ರಣ್ಣ ಅನುವಂಶಿಕ ಅರ್ಚಕರು ಶ್ರೀ ಕ್ಷೇತ್ರ ಕಟೀಲು, ಮೌಲಾನ ಯು ಕೆ ಅಬ್ದುಲ್ ಅಜೀಜ್ ದಾರಿಮಿ, sys ಜಿಲ್ಲಾಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.