ಮಂಗಳೂರು: ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿಯಲ್ಲಿ ಕೋಡಿಕಲ್‍ನಿಂದ ಮಂಗಳೂರು ಜಂಕ್ಷನ್‍ಗೆ (ಕಂಕನಾಡಿ ರೈಲು ನಿಲ್ದಾಣ) ಹೊಸ ಬಸ್ ಮಂಜೂರು ಮಾಡಲಾಗಿದ್ದು, ಬುಧವಾರಕೋಡಿಕಲ್ ನಾರಾಯಣ ಗುರು ಮಂದಿರದ ಹತ್ತಿರ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಅಧ್ಯಕ್ಷಸುರೇಂದ್ರ ಕಂಬಳಿ, ಮಾಜಿ ಮೇಯರ್ ಶಶಿಧರ ಹೆಗಡೆ, ಮಾಜಿ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ ,ಮಾಜಿ ಕಾಪೆರ್Çರೇಟರ್ ಪದ್ಮನಾಭ ಅಮೀನ, ಜಿಲ್ಲೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಲ್ಸ್ಟನ್ ಡಿಕುನ್ಹಾ, ಶಾಂತಲಾ ಗಟ್ಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ನೀತಾ ಡಿಸೋಜಾ, ವಿದ್ಯಾ ಅತ್ತಾವರ, ಮಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.