ಮಂಗಳೂರು: ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಜುಲೈ 25 ಮತ್ತು 26 ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಜುಲೈ 25 ರಂದು ಮಧ್ಯಾಹ್ನ 12:45 - ಮಂಗಳೂರು ವಿಮಾನ ನಿಲ್ದಾಣ ಆಗಮನ, 1:20- ಸಕ್ರ್ಯೂಟ್ ಹೌಸ್, ಬಳಿಕ ಉಡುಪಿಗೆ ನಿರ್ಗಮನ. ಜುಲೈ 26 ರಂದು ಮಧ್ಯಾಹ್ನ 12 ಗಂಟೆ - ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ( ಐ.ಆರ್.ಸಿ.ಎಸ್) ಶತಮಾನೋತ್ಸವ ಕಟ್ಟಡದ ಉದ್ಘಾಟನೆ, 3:30- ಮೂಡಬಿದ್ರಿ ಆಳ್ವಾಸ್ ಕಾಲೇಜಿನಲ್ಲಿ ದಿ ಪ್ರೇರಣಾ ದಿವಸ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 5:50 ರಾಜ್ಯಪಾಲರು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.