ಚಿತ್ರ / ವರದಿ : ರೋನ್ಸ್ ಬಂಟ್ವಾಳ್
ಮುಂಬಯಿ: ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್ (ಕೆಎಸಿಟಿ) ಸಂಸ್ಥೆ ರವಿವಾರ ಬೆಳಿಗ್ಗೆ ಜೆರಿಮೆರಿ ಇಲ್ಲಿನ ಮ್ಯಾಕ್ಸಸ್ ಚಿತ್ರಮಂದಿರದಲ್ಲಿ ‘ಫೊಂಡಾಚೊ ಮಿಸ್ತೆರ್’ ಕೊಂಕಣಿ ಚಲನಚಿತ್ರ (ಸಿನಿಮಾ) ಪ್ರದರ್ಶಿಸಿತು.
ಕಾರ್ಯಕ್ರಮದಲ್ಲಿ ಜೆರೆಮೆರಿ ಸೈಂಟ್ ಜೂಡ್ ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಎಲಾಯಸ್ ಡಿ’ಸೋಜಾ, ಅವರ್ ಲೇಡಿ ಆಫ್ ರೊಜಾರಿ ಇಗರ್ಜಿಯ ಸಹ ಧರ್ಮಗುರು ಫಾ| ನೆಲ್ಸನ್ ಸಲ್ಡಾನ್ಹಾ, ಜೀನ್ ಎಂ.ಗೋಮ್ಸ್, ಆಲ್ವಿನ್ ರಾಸ್ಕಿನ್ಹಾ, ಸಿ| ನಿವೇಸ್ ಡಿ’ಸೋಜಾ, ಸಿ| ಪೆಲ್ಸಿ ಮಿನೇಜಸ್, ಸಿ| ಗ್ರೇಸ್ ಲೋಬೊ, ದಿವೋ ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಲೋ, ಸುಜಾನ್ಹಾ ಎಲ್.ಕುವೆಲ್ಲೋ, ಫ್ಲೋರಾ ಡಿಸೋಜಾ ಜೆರಿಮೆರಿ, ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ, ಉಪ ಕಾರ್ಯಾಧ್ಯಕ್ಷ ವಾಲ್ಟರ್ ಡಿ’ಸೋಜಾ ಕಲ್ಮಾಡಿ (ಜೆರಿಮೆರಿ), ಕಾರ್ಯದರ್ಶಿ ಪೀಟರ್ ರೆಬೇರೊ, ಕೋಶಾಧಿಕಾರಿ ಪ್ರಿತೇಶ್ ಕಾಸ್ತೆಲಿನೋ ಜೊತೆ ಕಾರ್ಯದರ್ಶಿ ವಿನ್ಸೆಂಟ್ ಕಾಸ್ತೆಲಿನೋ, ಸದಸ್ಯರುಗಳಾದ ಬಿ.ಸಿ ಆಳ್ವ, ಗ್ರೆಗೋರಿ ಮೊನಿಸ್, ಮ್ಯಾನುವೇಲ್ ಪಿ.ಫೆರ್ನಾಂಡಿಸ್, ಐಡಾ ಎಂ.ಮೊಂತೆರೋ, ಆನಿತಾ ಸುವಾರಿಸ್, ರೋಷನ್ ಸೆರಾವೋ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಆರೋಗ್ಯನಿಧಿಯ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಯನ್ (ಫೆರ್ನಾಂಡಿಸ್) ಮ್ಯಾಗ್ನೆಟೋ ಅವರ ಸಂಪಾದನೆ, ರಚನೆ, ನಿರ್ದೇಶನ ಮತ್ತು ಪ್ರಧಾನ ನಿರ್ಮಾಕತ್ವ, ಡಾ| ಮೆಲ್ವಿನ್ ಪೆರ್ನಲ್ ಅವರ ಸಹ ಬರಹವಣಿಗೆ ಹಾಗೂ ಉತ್ಪಾದನಾ ವ್ಯವಸ್ಥಾಪಕತ್ವದಲ್ಲಿ ಆಲ್ವಿನ್ ಸಿಕ್ವೇರಾ ಅವರ ಛಾಯಾಗ್ರಹಣ ನಿರ್ದೇಶಕತ್ವ, ಪ್ರಜೋತ್ ಡೆಸಾ ಅವರ ಸಂಗೀತ ಮತ್ತು ಹಿನ್ನೆಲೆ ಗೆರೆಯೆಳೆಯೊಂದಿಗೆ ರೋಶ್ ಫೆರ್ನಾಂಡಿಸ್ ಧ್ವನಿ ವಿನ್ಯಾಸ ಮತ್ತು ಲೆಕ್ಸ್ಸಾ ಲೈಟಿಂಗ್ಸ್ ಸಹಯೋಗದೊಂದಿಗೆ ರಾಯನ್ ಮ್ಯಾಗ್ನೆಟೋ ಫಿಲ್ಮ್ಸ್ಸ್ ಪ್ರಸ್ತುತಿಯಲ್ಲಿ ಮೂಡಿ ಬಂದಿರುವ ‘ಫೊಂಡಾಚೊ ಮಿಸ್ತೆರ್’ ಕೊಂಕಣಿ ಸಿನಿಮಾ ಪ್ರದರ್ಶಿಸಲ್ಪಟ್ಟಿತು.