ಜಗತ್ತನ್ನು ನಡುಗಿಸುತ್ತಿರುವ ಕೋವಿಡ್ ಅಟ್ಟಹಾಸ ಮುಂದುವರಿದಿದೆ. ನಿನ್ನೆ ಹೊಸದಾಗಿ ಎಂಟೂವರೆ ಲಕ್ಷ ಹೊಸ ಸೋಂಕಿತರು ಲೋಕದಲ್ಲಿ ಕಂಡು ಬಂದಿದೆ. ಜಾಗತಿಕವಾಗಿ ಕೊರೋನಾ ಏಟು ತಿಂದವರ ಸಂಖ್ಯೆಯು 16,18,24,477 ಮುಟ್ಟಿತು.
ಅದೇ 24 ಗಂಟೆಗಳ ಅವಧಿಯಲ್ಲಿ ಹದಿಮೂರು ಸಾವಿರ ಹೊಸ ಮರಣಗಳು ಕೊರೋನಾದಿಂದ ಆಗಿದೆ. ಒಟ್ಟು ಕೋವಿಡ್ ಮೃತರ ಸಂಖ್ಯೆಯು 33,58,513 ದಾಟಿ ನಡೆಯಿತು.
ರಾಜ್ಯದಲ್ಲಿ ನೋವೆಲ್ ಕೋವಿಡ್ 19ರಿಂದ ಆದ ಸಾವಿನಲ್ಲಿ 60 ಶೇಕಡಾಕ್ಕಿಂತಲೂ ಹೆಚ್ಚು ಸಾವು ಬೆಂಗಳೂರಿನಲ್ಲಿ ಆಗಿದೆ. ಹಾಗಾಗಿ ಬೆಂಗಳೂರು ರಾಜ್ಯದ ಕೊರೋನಾ ರಾಜಧಾನಿ ಎನಿಸಿದೆ.
ಮೇ ತಿಂಗಳ 1ರಿಂದ 13ನೇ ತಾರೀಕಿನ 13 ದಿನಗಳಲ್ಲಿ 2,754 ಕೊರೋನಾ ಸಾವು ಬೆಂಗಳೂರಿನಲ್ಲಿ ಆಗಿದೆ. ಬೆಂಗಳೂರಿನ ಒಟ್ಟು ಕೊರೋನಾ ಸಾವಿನ ಸಂಖ್ಯೆ 9,126. ಕಳೆದ 13 ದಿನಗಳ ಸಾವು ಅವುಗಳಲ್ಲಿ 30% ಆಗಿದೆ.