ಇಂದಿಗೂ ಅದೆಷ್ಟೋ ಯುಗ ಕಳೆದರೂ ಪ್ರೀತಿ ಎಂದರೆ ನೆನಪಾಗುವುದು ಅಗ್ರಸ್ಥಾನದಲ್ಲಿ ನಿಲ್ಲುವುದು ಕೃಷ್ಣರಾಧರ ಹೆಸರೇ. ಪ್ರೀತಿ ಎಂದರೆ ಎರಡು ದೇಹದ ಆಕರ್ಷಣೆ ಅಲ್ಲಾ ಎರಡು ಮನದ ಸಮ್ಮಿಲನ ಅಲ್ಲಾ ಎರಡು ಆತ್ಮಗಳ ಸಂಯೋಗ ಎಂದು ಸಾಧಿಸಿದವರು. ಪ್ರೀತಿಸುವವರು ತುಂಬಾ ಜನ ಸಿಗಬಹುದು ಪ್ರೀತಿಯನ್ನ ಕೊನೆಯವರೆಗೂ ಉಳಿಸಿಕೊಳ್ಳುವವರು ಸಿಗೋದು ಕಡಿಮೆಯೇ.  ಜಗದ ಕಲ್ಯಾಣಕ್ಕಾಗಿ ಪ್ರೀತಿಯನ್ನ ತ್ಯಾಗ ಮಾಡಿದವರು ಕೃಷ್ಣರಾಧರು. 

ರಾಧಾ-ಕೃಷ್ಣರ ಪ್ರೀತಿ ಎಷ್ಟು ಬಲವಾಗಿತ್ತೆಂದರೆ ಎಲ್ಲಾದರು ಕೃಷ್ಣನಿಗೆ ಏಟಾದರೆ ಅದನ್ನು ಶ್ರೀಕೃಷ್ಣ ತನ್ನ ರಾಧೆಗೆ ಏನೋ ಚಿಂತೆಯಲ್ಲಿದ್ದಾಳೆ, ಸಂಕಷ್ಟದಲ್ಲಿದ್ದಾಳೆಂದು ಭಾವಿಸುತ್ತಿದ್ದನಂತೆ. ಕೃಷ್ಣ ರಾಧೆ ಬಾಲ್ಯದಲ್ಲಿಯೇ ಸ್ನೇಹಿತರಾಗಿದ್ದು ಪ್ರೇಮಿಗಳಾದವರು . ಕೃಷ್ಣನ ಕೊಳಲ ರಾಗಕ್ಕೆ ರಾಧೆ ಹಾಡು ಹೇಳಿ ನೃತ್ಯ ಮಾಡುತ್ತಿದ್ದಳು. ಕೃಷ್ಣನಿಗೆ ಅದೆಷ್ಟೋ ಗೋಪಿಕೆಯರಿದ್ದರೂ ರಾಧೆಯೇ ತುಂಬಾ ಅಚ್ಚುಮೆಚ್ಚಿನವಳಾಗಿದ್ದಳು. 

ಕೃಷ್ಣನ ವೃಂದಾನ ತೊರೆದು ರಾಧನ ಬಿಟ್ಟು ಹೋಗುವಾಗ ರಾಧೆ ಅದೆಷ್ಟೋ ನೋವು ಅನುಭವಿಸಿರಬಹುದು ಊಹಿಸುವುದು ಅಸಾಧ್ಯ ಒಂದು ಹೆಣ್ಣು ತಾನು ಮನಸಾರೆ ಪ್ರೀತಿಸಿದವನನ್ನು ತೊರೆಯ ಬೇಕೆಂದರೇ ಅವಳ ಮನಸ್ಥಿತಿ ಅದು ಹೇಗೆ ಸಂತೈಸಿರಿಕೊಂಡಿರಬೇಕು.

ರಾಧೆ ಮತ್ತು ಕೃಷ್ಣ ಯಾವತ್ತೂ ಪತಿ-ಪತ್ನಿಯಾಗಿರಲಿಲ್ಲ. ಮದುವೆಯ ಬಂಧನದಲ್ಲೂ ಅವರು ಬಂಧಿಯಾಗಿರಲಿಲ್ಲ. ಆದರೂ ಅವರಿಬ್ಬರೂ ಪ್ರೇಮಿಗಳಾಗಿದ್ದರು. ಅವರಿಬ್ಬರ ಪ್ರೀತಿಯಲ್ಲಿ ಯಾವುದೇ ದೈಹಿಕ ಆಕರ್ಷಣೆ ಇಲ್ಲದೆ ಇದ್ದ ಕಾರಣದಿಂದಾಗಿ ಪ್ರೀತಿಯು ತುಂಬಾ ಪವಿತ್ರವಾಗಿತ್ತು. ಇದು ನಿಷ್ಕಾಮ ಮಟ್ಟದ ಪ್ರೀತಿಯಾಗಿತ್ತು. ಕೃಷ್ಣನಿಗೆ ರಾಧೆಯ ಭಕ್ತಭಾವವೂ ಅಭೂತಪೂರ್ವಾಗಿತ್ತು. ಒಂದು ವೇಳೆ ಅವರು ದಾಂಪತ್ಯದಲ್ಲಿ ಬಂಧಿಗಳಾಗಿ ಸಂಸಾರ ಜೀವನ ಸಾಗಿಸಿದ್ದರೇ ಅಮರ ಪ್ರೇಮಿಗಳಾಗಿ ನಿಲ್ಲುತ್ತಿರಲಿಲ್ಲ. ಪ್ರೀತಿ ತ್ಯಾಗದಲ್ಲಿ ವೇದನೆಯಲ್ಲಿ ಕೊನೆ ಆಗಿರುವುದರಿಂದ ಇಂದಿಗೂ ಎಂದಿಗೂ ಕಾಡುವ ಅಮರ ಪ್ರೇಮಿಗಳಾಗಿ ನಿಲ್ಲುತ್ತಾರೆ.

ಅಗಲಿದ ಪ್ರೇಮಿಗಳೆದ್ದವರೆಷ್ಟೋ 

ವಿರಹದ ವೇದನೆಯಲ್ಲಿ ಬಳಲಿದರೆಂದರವರೆಷ್ಟೋ

ಅಮರ ಪ್ರೇಮಿಗಳೆಂದು ಹೊಗಳಿದವರೆಷ್ಟೋ

ಪ್ರೀತಿಗೂ ತ್ಯಾಗಕ್ಕೂ ಅರ್ಥ ಆದವರೆಂದವರೆಷ್ಟೋ

ದೂರಿ ತೆಗಳಿದವರೆಷ್ಟೋ

ಅವನು ನಾನು ಒಂದೇ ಆತ್ಮ

ಅವನಲ್ಲಿ ರಾಧೆ ರಾಧೆಯಲ್ಲಿ ಅವನು

ಕಾಣುವ ದೇಹಗಳೆರಡು ಉಸಿರು ಒಂದೇ

ಕೃಷ್ಣ ನಿಲ್ಲದೆ ರಾಧ ಅಪೂರ್ಣ

ರಾಧೆ ಇಲ್ಲದೆ ಕೃಷ್ಣ ಅಪೂರ್ಣ

ರಾಧಕೃಷ್ಣ ಕೃಷ್ಣರಾಧ


ರೇಷ್ಮಾ