ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ 


ಹಿಂದೂ ವರ್ಷ ಆರಂಭವು ಚೈತ್ರ ಶುಕ್ಲ ಪಾಡ್ಯದಿಂದ ಆರಂಭವಾಗುತ್ತದೆ. ಎಂದರೆ ಆ ತರುವಾಯದ 12 ತಿಂಗಳುಗಳನ್ನು ವೇದಗಳಲ್ಲಿ 'ದ್ವಾದಶ ಮಾಸೇ ಸಂವತ್ಸರಹ' ಇಂದು ಹೇಳಲಾಗಿದೆ. ಚೈತ್ರ ಶುಕ್ಲ ಪಾಡ್ಯವೇ ನವ ವರ್ಷ ಆರಂಭ ಆಗಿರಲು ಮುಖ್ಯವಾಗಿ ಹಲವಾರು ಕಾರಣಗಳಿವೆ. 

ಚಕ್ರವರ್ತಿ ಶಾಲಿವಾಹನನ್ನು ಶತ್ರುಗಳ ಮೇಲೆ ವಿಜಯವನ್ನು ಸಾಧಿಸಿ ತನ್ನ ಶಕೆಯನ್ನು ಆ ದಿನದಿಂದ ಆರಂಭಿಸಿದನು ಎಂಬ ಪ್ರತೀತಿ ಇದೆ. ಭಗವಾನ್ ಶ್ರೀರಾಮನು ರಾವಣನನ್ನು ವಧಿಸಿ ವನವಾಸವನ್ನು ಮುಗಿಸಿ ಇದೇ ದಿನದಂದು ಅಯೋಧ್ಯೆಗೆ ಪ್ರವೇಶಿಸಿದನು ಎಂದು ತಿಳಿದು ಬರುತ್ತದೆ. ಹೀಗಾಗಿ ರಾಮನವಮಿಯ ನವರಾತ್ರಿಯ ಪ್ರಾರಂಭ ಇದೇ ದಿನ ನಡೆಯುತ್ತದೆ. ಯುಗಾದಿ ಬಹಳ ಶುಭ ಮಹೂರ್ತ ಎಂದು ತಿಳಿಯಲ್ಪಡುತ್ತದೆ ಆದುದರಿಂದ ಮಾರ್ಚ್ 30 ರಂದು ವಿಶ್ವಾವಸು ಸಂವತ್ಸರ ಪ್ರಾರಂಭವಾಗುವ ದಿನವಾಗಿದ್ದು ನವಾ ಪಂಚಾಂಗವು ಅಂದು ಪೂಜಿಸಲ್ಪಡುತ್ತದೆ. 

ಚೈತ್ರ ತಿಂಗಳಿಂದ ಬಿಸಿಲಿನ ಪ್ರಭಾವ ದಿಂದಾಗಿ ಕಾಯಿಲೆ, ಬೊಕ್ಕೆ, ಗುಳ್ಳೆ, ಬೆವರು ಸಾಲೆ, ಇತ್ಯಾದಿ ಹೆಚ್ಚಾಗುತ್ತದೆ. ಅಂತಹದರಿಂದ ರಕ್ಷಣೆಯನ್ನು ಪಡೆಯುವುದಕ್ಕಾಗಿ ಚೈತ್ರ ಮಾಸದಲ್ಲಿ ಕಹಿಬೇವಿನ ಎಲೆಗಳನ್ನು ಕಲ್ಲು ಸಕ್ಕರೆ, ಮೆಣಸಿನ ಕಾಳಿನೊಂದಿಗೆ ಸೇವಿಸುವ ಕ್ರಮವು ಆರೋಗ್ಯದ ದೃಷ್ಟಿಯಿಂದ ಸಾಮಾನ್ಯವಾಗಿದೆ.