ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಸಂಬಂಧಪಟ್ಟಂತಹ 2.71 ಎಕರೆ ವೆನ್ಲಾಕ್ ಜಿಲ್ಲಾ ಅಸ್ಪತ್ರೆಗೆ ಸೇರಿದ ಜಾಗದಲ್ಲಿ ಪ್ಯಾರಾಮೆಡಿಕಲ್ ಕಾಲೇಜು ನರ್ಸಿಂಗ್ ತರಭೇತಿ ಶಾಲೆ ಮತ್ತು ಅಧಿಕಾರಿಗಳ/ಸಿಬ್ಬಂದಿ ವರ್ಗಗಳ ವಸತಿ ಗೃಹ ನಿರ್ಮಾಣ ಮಾಡಬೇಕಾಗಿದ್ದ ಸ್ಥಳಕ್ಕೆ ಶಾಸಕ ಐವನ್ ಡಿʼಸೋಜಾ ಅಧಿಕಾರಿಗಳೊಂದಿಗೆ ಭೇಟಿ, ಪರಿಶೀಲನೆ.
ವೆನ್ಲಾಕ್ ಜಿಲ್ಲಾ ಅಸ್ಪತ್ರೆ ಮಂಗಳೂರು ಇದಕ್ಕೆ ಸಂಬಂಧಪಟ್ಟ 2.71 ಎಕರೆ ಖಾಲಿ ಜಾಗವಿದ್ದು ಈ ಜಾಗಕ್ಕೆ ಇಂದು ಶಾಸಕರಾದ ಐವನ್ ಡಿʼಸೋಜಾರವರು ಜಿಲ್ಲಾ ಅರೋಗ್ಯ ಅಧಿಕಾರಿ ತಿಮ್ಮಯ್ಯ ಶಸ್ತ್ರಚಿಕಿತ್ಸಕ ಶಿವಪ್ರಸಾದ್, ಮತ್ತು ಇವರುಗಳ ತಂಡ ಹಾಗೂ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳಾದ ಇವರುಗಳು ಜೊತೆ ಭೇಟಿ ನೀಡಿ ಪರಿಶೀಲನೆ ಮಾಡಿ ಈ ಸ್ಥಳವನ್ನು ಅಭಿವೃದ್ದಿ ಪಡಿಸಲು ಈಗಾಗಲೇ ಸದ್ರಿ ಸ್ಥಳದಲ್ಲಿ ಪ್ಯಾರಮೆಡಿಕಲ್ ಕಾಲೇಜ್, ನರ್ಸಿಂಗ್ ಕಾಲೇಜು,ಮತ್ತು ಅಧಿಕಾರಿಗಳಿಗೆ/ಸಿಬ್ಭಂದಿಗಳಿಗೆ ವಸತಿ ಗೃಹ ನಿರ್ಮಣದ ಅವಶ್ಯಕತೆ ಇರುವುದರಿಂದ ಈ ಸ್ಥಳದಲ್ಲಿ ಹೆಚ್ಚು ಜನರಿಗೆ ತರಭೇತಿ ನೀಡುವಂತಹ ಹಾಗೂ ಹೊರರಾಜ್ಯಗಳಿಂದ ಬರುವಂತಹ ಎಲ್ಲಾ ವೈಧ್ಯಾಧಿಕಾರಿಗಳಿಗೆ ನರ್ಸಿಂಗ್ಗಳಿಗೆ ವಸತಿಗೃಹವನ್ನು ಕಟ್ಟಲು ಈ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಸದ್ರಿ ಸ್ಥಳವು ಮಂಗಳೂರಿನ ಹೃದಯ ಭಾಗದಲ್ಲಿರುವುದರಿಂದ ಈ ಸ್ಥಳದಲ್ಲಿ ಅನೇಕ ಯೋಜನೆಗಳು ಅದೇ ರೀತಿ ಬೆಂಗಳೂರಿನ ಹೃದಯ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಶಾಖೆಯೋಂದನ್ನು ಈ ಭಾಗದಲ್ಲಿ ತೆರಯುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ಅರೋಗ್ಯ ಸಚಿವವರ ಗಮನಕ್ಕೆ ತರಲಾಗಿದೆ. ಆರೋಗ್ಯ ಸಚಿವರು ಈಗಾಗಲೇ OPD ಬ್ಲಾಕ್ ಗೆ 20ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದ್ದು, ಅದೇ ರೀತಿ 7 ಸರಕಾರಿ ಆಸ್ಪತ್ರೆಗಳನ್ನು ಅಭಿವೃದ್ದಿ ಪಡಿಸುವಂತಹ ದೃಷ್ಟಿಯಲ್ಲಿ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೂ ಬಜೆಟ್ನಲ್ಲಿ ಇರಿಸಲಾದ 800ಕೋಟಿ ರೂಪಾಯಿಗಳಲ್ಲಿ 100 ಕೋಟಿ ರೂಪಾಯಿ ಇರಿಸುವಂತಹ ಅವಕಾಶಗಳಿದ್ದು, ಈ ಹಣವನ್ನು ಬಳಕೆ ಮಾಡಿ ಇಲ್ಲಿ ಪ್ಯಾರಾಮೆಡಿಕಲ್ ಕಾಲೇಜು ನರ್ಸಿಂಗ್ ಕಾಲೇಜು ಮತ್ತು ಅಧಿಕಾರಿಗಳ ವಸತಿ ಗೃಹ ನಿರ್ಮಾಣವು ಮಾಡುವಂತಹ ಒಂದು ಯೋಜನೆಗೆ ಕೂಡಲೇ ಚಾಲನೆ ನೀಡಬೇಕೆಂದು ಈಗಾಗಲೇ ನಿರ್ಧರಿಸಲಾಗಿದೆ ಅಗಸ್ಟ್ ಒಂದರಂದು ಆರೋಗ್ಯ ರಕ್ಷಾ ಸಮಿತಿಯ ಸಭೆ ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯಲಿದ್ದು, ಅಂದು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಯೋಜನೆಯ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ, ಈ ಯೋಜನೆಯನ್ನು ಅಂತಿಮಗೊಳಿಸಲು ಅರೋಗ್ಯ ಸಚಿವರನ್ನು ಕೇಳಿಕೊಳ್ಳಲು ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿರುವಂತಹ ಕಸಕಡ್ಡಿಗಳನ್ನು ಗಾರ್ಬೇಜನ್ನು ಕೂಡಲೇ ಸ್ವಚ್ಚ ಮಾಡಬೇಕೆಂದು ಐವನ್ ಡಿʼಸೋಜಾರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಡಾ| ಶಿವಪ್ರಸಾದ್ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರು, ಡಾ| ಸುಧಾಕರ್ ವೈದ್ಯಾಧಿಕಾರಿ, ಡಾ| ತಿಮ್ಮಯ್ಯ ಜಿಲ್ಲಾ ಆರೋಗ್ಯಾಧಿಕಾರಿಯವರು, ಪದ್ಮನಾಭ ಅಮೀನ್, ಅನಿಲ್ ರಸ್ಕಿನಾ, ಪ್ರಮೀಳಾ ಈಶ್ವರ್ , ಮನೀಶ್, ಶಶಿಧರ್ ಬಜಾಲ್, ದಾಮೋದರ್ ಪುತ್ತೂರು ಮುಂತಾದವರು ಜೊತೆಗಿದ್ದರು.