ವರದಿ ರಾಯಿ ರಾಜಕುಮಾರ್
ಕಾರ್ಕಳ: ದೇಶದ ಹಲವಾರು ಕಡೆಯ ಅಂಚೆ ಇಲಾಖೆಯಲ್ಲಿ ಉನ್ನತ ಹುದ್ದೆಯ ಅಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸಿ ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದ ಅಧಿಕಾರಿ ಕಾರ್ಕಳ ಕೇಶವರಾವ್ ಅವರ ನೆನ್ನೆ ರಾತ್ರಿ ನಿಧನರಾಗಿರುತ್ತಾರೆ.
ಇವರು ಶಂಕರ ಪ್ರತಿಷ್ಟಾನ, ಕಾರ್ಕಳ ಇದರ ಗೌರವಾನ್ವಿತ ನಿಕಟಪೂರ್ವ ಅಧ್ಯಕ್ಷರಾಗಿದ್ದು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಸಂಘಕ್ಕೆ ಸದಾ ಬೆಂಬಲವಾಗಿ ಇರುತ್ತಿದ್ದರು. ಇವರು ಅನಾರೋಗ್ಯ ದಿಂದ ಬಳಲುತ್ತಿದ್ದು ರಾತ್ರಿ 12.15 ಕ್ಕೆ ಸ್ವರ್ಗಸ್ಥ ರಾಗಿರುತ್ತಾರೆ. ಕುಕ್ಕುಂದೂರು ಜೋಡೆ ರಸ್ತೆಯ ಸಮೀಪದಲ್ಲಿ ಇವರು ಸ್ವಂತ ಮನೆಯನ್ನು ಹೊಂದಿರುತ್ತಾರೆ. ಹಲವಾರು ಸಂಘ ಸಂಸ್ಥೆ ಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಾ ಜನಪ್ರಿಯರಾಗಿದ್ದರು. ಅವರು ಧರ್ಮಪತ್ನಿ ರಾಜೇಶ್ವರಿ, ಮಕ್ಕಳಾದ ರಾಕೇಶ್ ರಾವ್, ಆದರ್ಶ್ ರಾವ್, ಸೊಸೆಯಂದಿರು, ಮೊಮ್ಮಕ್ಕಳನ್ನು, ಅಗಲಿರುತ್ತಾರೆ. ಅವರ ಪಾರ್ತಿವ ಶರೀರವನ್ನು ಇವತ್ತು ಸೆ. 27 ರಂದು ಮಧ್ಯಾಹ್ನ ಅವರ ಮನೆ ಕುಕ್ಕುಂದೂರ್ ನಲ್ಲಿನ "ಮಾತೃಶ್ರೀ" ಗೆ ತಂದು ಆಮೇಲೆ ತಾಲೂಕು ಬ್ರಾಹ್ಮಣ ಪರಿಷತ್ ನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುದು ಎಂದು ತಿಳಿಸಿರುತ್ತಾರೆ.