ಮುಂಬಯಿ: ದಿ. ಭಾರತ್ ಕೋಪರೇಟಿವ್ ಬ್ಯಾಂಕ್ ( ಮುಂಬಯಿ )ಲಿಮಿಟೆಡ್ ಇದರ ಪುತ್ತೂರು ಶಾಖೆಯಲ್ಲಿ ೪೬ನೇ ವರ್ಷದ ಸಂಸ್ಥಾಪನ ದಿನವನ್ನು ಬುಧವಾರ (ಆ.೨೧)ರಂದು ವಿಜೃಂಭಣೆಯಿಂದ ಅಚರಿಸಿದ್ದು, ಮುಖ್ಯ ಅತಿಥಿsಯಾಗಿ ವಿಜಯ ಕಾಲೇಜು ಮುಲ್ಕಿ ಇದರ ನಿವೃತ ಪ್ರೊಪೆಸರ್ ಗೋವಿಂದ ಭಟ್ ಉಪಸ್ಥಿತರಿದ್ದ ದೀಪ ಪ್ರಜ್ವಲಸಿ, ಕೇಕ್ ಕತ್ತರಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.

ಗೋವಿಂದ ಭಟ್  ಮಾತನಾಡಿ ಇಂದಿನ ಆಧುನಿಕ ಉದ್ಯೋಗ ಮಾಡುವ ಬ್ಯಾಂಕಿಂಗ್ ಕ್ಷ್ಷೇತ್ರವು ಸಾರ್ವಜನಿಕ ವಲಯದಲ್ಲಿ ಅತಿ ಅಗತ್ಯವಾಗಿದೆ. ಸರಕಾರಿ ಬ್ಯಾಂಕ್‌ಗಳ ಸೇವೆಗಳಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಆದರೆ ಪುತ್ತೂರು ಭಾರತ್ ಬ್ಯಾಂಕ್ ನ ಪ್ರಬಂಧಕರು ಅಥವ ಸಿಬ್ಬಂದಿಗಳ ನಗು ಮುಖದ ಸೇವೆಯಿಂದಾಗಿ ಇಲ್ಲಿಗೆ ಬಂದ ಗ್ರಾಹಾಕರು ಬೇರೆ ಬ್ಯಾಂಕ್‌ನ ಮೆಟ್ಟಲು ಹತ್ತುವ ಪ್ರಶ್ನೆಯೇ ಇಲ್ಲ, ಆ ಮಟ್ಟಿಗೆ ಗ್ರಾಹಾಕರಿಗೆ ಸೇವೆಯನ್ನು ಒದಗಿಸುತ್ತಾರೆ. ಇವರ ಸೇವೆ ಪುತ್ತೂರಿನ ಎಲ್ಲ ಸಾರ್ವಜನಿಕರಿಗೂ, ಉದ್ಯಮಿಗಳಿಗೂ ಸಿಗಲಿ ಮತ್ತು ಇನ್ನು ಹೆಚ್ಚಿನ ಶಾಖೆಗಳು ಲಭ್ಯವಾಗಲಿ ಎಂದು ಶುಭ ಹಾರೈಸಿದರು.

ಹಿರಿಯ ಉದ್ಯಮಿಗಳಾದ ಪದ್ಮ ಸೋಲಾರ್ ಮಾಲಕ ಪದ್ಮನಾಭ ಶೆಟ್ಟಿ ಮಾತನಾಡಿ ಭಾರತ್ ಬ್ಯಾಂಕ್‌ನ ಈಗಿನ ಹಾಗು ಹಿಂದಿನ ಎಲ್ಲ ಪ್ರಭಂದಕರು ಹಾಗು ಸಿಬ್ಬಂದಿಗಳು ನನಗೆ ತುಂಬಾ ಆತ್ಮೀಯ ಬಂಧುಗಳೇ ಆ ಕಾರಣದಿಂದ ನಾನು ಈ ಸಂಸ್ಥೆಯ ಗ್ರಾಹಕನಾಗಿದ್ದೇನೆ. ಬ್ಯಾಂಕ್ ಗೆ ಬಂದ ಗ್ರಾಹಕರನ್ನು ಬಂದ ಕೂಡಲೆ ತಮ್ಮ ಕೆಲಸವನ್ನು ನಗು ಮುಖದಲ್ಲಿ ಸಮಯವನ್ನು ವ್ಯವಾಯಿದೆ ಕ್ಲಪ್ತ ಸಮಯದಲ್ಲಿ ಸೇವೆಯನ್ನು ಒದಗಿಸುತಾರೆ, ಇದು ಬ್ಯಾಂಕ್ಕಿಗ್ ನ ಅಭಿವೃದ್ಧಿ ಗೆ ಒಂದು ನಿರ್ದೇಶನವಾಗಿದೆ ಎಂದರು.

ಸಂಘಟನೆಗಾರ ಉದ್ಯಮಿ, ಮೂರ್ತೆದಾರರ ಸೇವಾ ಸಹಕಾರ ಸಂಘ ಕುಂಬ್ರ್ ಪುತ್ತೂರು ಅಧ್ಯಕ್ಷ ಆರ್. ಸಿ. ನಾರಾಯಣ ಮಾತನಾಡಿ ಈ ಬ್ಯಾಂಕ್ ಪುತ್ತೂರಿನಲ್ಲಿ ಅತಿ ಅಲ್ಪ ಸಮಯದಲ್ಲಿ ಅತಿ ಹೆಚ್ಚು ಗ್ರಾಹಕಾರ ಮನೆ ಮಾತಾಗಿ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಸಿಬ್ಬಂದಿಗಳು ಗ್ರಾಹಕರೊಂದಿಗೆ ಇರುವ ವ್ಯವಾಹರದ ನಾಜೂಕು ನಯವಾದ ಮಾತು ಈ ಮೆಚ್ಚಿಗೆಗೆ ಪತ್ರ ಆಗಿದೆ, ಈ ಸಂದರ್ಭದಲ್ಲಿ ನಾನು ದಿವಂಗತ ಶ್ರೀ ಜಯ ಸಿ.ಸುವರ್ಣ ಅವರನ್ನು  ನೆನಪಿಸಿ, ಈ ಒಂದು ಬ್ಯಾಂಕ್ ಅವರು ಹಾಕಿ ಕೊಟ್ಟ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ ಉದಾಹರಣೆ ಅಂದ್ರೆ ತಪ್ಪಾಗದು ಎಂದರು.

ಉದ್ಯಮಿ ಸಂಜೀವ ಪಿ ಅಲ್ವಾ, ಪುತ್ತೂರು, ಬಿಲ್ಲವರ ಸಂಘ ಪುತ್ತೂರು ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಗುತ್ತು, ಕಾರ್ಯ ನಿರ್ವಹಣಾ ಅಧಿಕಾರಿ ಉದಯ ಕುಮಾರ್ ಕೋಲಾಡಿ, ಸಂಜೀವ ಪೂಜಾರಿ ಕಾಣಿಯೂರ್ ಉಪರೆಂಜರ್ ಅರಣ್ಯ ಇಲಾಖೆ ಮೊದಲಾದವರು ತಮ್ಮ ಅನಿಸಿಕೆಗಳೊಂದಿಗೆ ಶುಭಾರೈಸಿದರು.  

ಅಕ್ಷಯ ಕಾಲೇಜು ಪುತ್ತೂರು ಇದರ ಅಧ್ಯಕ್ಷರು ಜಯಂತ್ ನಡುಭಯಿಲ್, ಗೀತಾ ಭಟ್, ಶ್ರೀಲಂತ ಯಸ್ ರೈ, ಗುರುಪ್ರಸಾದ್ ಪುತ್ತೂರು ಕಾರ್, ಕೆ.ಚಂದ್ರಶೇಖರ್ ಪೂಜಾರಿ, ಸುಧಾಕರ್ ಕೆ ಪಿ, ಪರಿವರ್ ಸೊಸೈಟಿ ಪ್ರಬಂಧಕರು ನ್ಯಾಯಾದೀಶರಾದ ಕೆ.ಪಿ ಉಲ್ಲಾಸ್ ಕೋಟ್ಯಾನ್ , ಉದ್ಯಮಿ ನವೀನ್ ಶೆಟ್ಟಿ, ವಿಠ್ಠಲ್ ಶೆಟ್ಟಿ, ಶಾಖೆಯ ಸಿಬ್ಬಂದಿಗಳಾದ ಉಪ ಪ್ರಬಂಧಕಿ ಸ್ವಾತಿ ಜಿ ಸಾಲಿಯಾನ್, ಭಾಸ್ಕರ್ ಸರಪಾಡಿ, ಸ್ಮಿತಾ ಪೂಜಾರಿ,  ಶ್ರುತಿ ಅಮರ್ , ಶೀಪಲಿ ವಿಶಾಲ್, ಶ್ರುತಿ ಭಟ್, ಶ್ರೀಕಾಂತ್ ಹೆಗಡೆ, ಚಿತ್ರ ಕುಲಾಲ್  ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದರು.

ಶಾಖೆಯ ಪ್ರಬಂಧಕರಾದ  ಲಕ್ಷ್ಮೀಷ ವೈ ಮೊಗೇರಯ ಸ್ವಾಗತಿಸಿದರು. ಬ್ಯಾಂಕ್ ಸ್ಥಾಪನೆ ಆಗಿ ನಡೆದು ಬಂದ ಬಗ್ಗೆ ಗ್ರಾಹಕರಿಗೆ ಪ್ರಾಸ್ತಾವಿಕವಾಗಿ ತಿಳಿಸಿದರು, ಹರೀಶ ಶಾಂತಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ಬಂಗೇರ ಸರಪಾಡಿ ಧನ್ಯವಾದಗೈದರು.