ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರ ಮಾದೇಶ್ವರ ಬೆಟ್ಟದ ಕೂದಲು ಈ ವರುಷ 1.49  ಕೋಟಿ ರೂಪಾಯಿ ಆದಾಯ ತಂದಿದೆ.

2020ರ ನವೆಂಬರ್ 2ರಿಂದ ಈ ಸೆಪ್ಟೆಂಬರ್ 2ರವರೆಗೆ ಲಾಕ್‌ಡೌನ್ ಕಾಲ ಬಿಟ್ಟು ಉಳಿದ 99 ದಿನಗಳಲ್ಲಿ ಒಟ್ಟಾದ ಕೂದಲನ್ನು ಇ- ಟೆಂಡರ್ ಹಾಕಿದಾಗ ಅದರಲ್ಲಿ 14 ಜನ ಭಾಗವಹಿಸಿದ್ದು, ಮೈಸೂರಿನ ಶ್ರೀನಿವಾಸ್ ಮಹಾದೇವನ್ ಹೆಚ್ಚಿನ ಬಿಡ್ ಸಲ್ಲಿಸಿ ಕೂದಲು ಕೊಂಡರು.

4,595 ಕಿಲೋ ಮಾಮೂಲು ಕೂದಲು ಮತ್ತು 951 ಕಿಲೋ ಉದ್ದ ಕೂದಲು ಸಂಗ್ರಹವಾಗಿತ್ತು. ಉದ್ದ ಕೂದಲು ಈ ಬಾರಿ ಕಿಲೋಗೆ ರೂ. 15,535ರ ದರ ತಂದಿದೆ.