ವರದಿ ರಾಯಿ ರಾಜಕುಮಾರ
ಮೂಡುಬಿದಿರೆ ಮಹಾವೀರ ಕಾಲೇಜಿನ ಎನ್ ಎಸ್ ಎಸ್ ಶಿಬಿರ ಮುಂಡ್ಕೂರು ಪೊಸ್ರಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ 12ರಂದು ಪ್ರಾರಂಭವಾಯಿತು. ಹತ್ತು ದಿನಗಳ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ, ಸ್ವಚ್ಛತೆಗೆ ಅಗತ್ಯ ಇರುವ ಕಾರ್ಯಗಳನ್ನು ನೆರವೇರಿಸಿ ಕೊಡಲಿದ್ದಾರೆ.



ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಫಲಿಗ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿಡ್ಡೋಡಿ ಲಯನ್ಸ್ ಅಧ್ಯಕ್ಷ ಸಂದೀಪ್ ಸುವರ್ಣ, ಮುಂಡ್ಕೂರು ಲಯನ್ಸ್ ಅಧ್ಯಕ್ಷ ಯಶವಂತ್ ಆಚಾರ್ಯ, ಕೆಎಂಎಫ್ ನಿರ್ದೇಶಕ ಕಡಂದಲೆ ಸುಚರಿತ ಶೆಟ್ಟಿ, ಶಾಲಾ ಸಂಚಾಲಕ ಡಾ. ದೇವಿ ಪ್ರಸಾದ್ ಶೆಟ್ಟಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ ಕೆ ಅಭಯ ಚಂದ್ರ ಶಿಬಿರದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ರಾಧಾಕೃಷ್ಣ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಹರೀಶ್, ಶಿಬಿರದ ನಿರ್ದೇಶಕಿ ಶಾರದಾ, ಹಾಗೂ ಇನ್ನಿತರರು ಹಾಜರಿದ್ದರು.
ಎನ್ ಎಸ್ ಎಸ್ ವಿದ್ಯಾರ್ಥಿ ನಿರ್ದೇಶಕರುಗಳಾದ ಕೀರ್ತನ, ವನಿತಾ, ಹಾಗೂ ತೇಜಸ್ ಕಿಣಿ ಕಾರ್ಯಕ್ರಮವನ್ನು ಸಂಘಟಿಸಿದ್ದರು.