ಮಂಗಳೂರು, ನ. 28: ಪ್ರಜ್ಞಾ ಸಾಂತ್ವಾನ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ತೆರವಾಗಿರುವ ಸಮಾಜ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಮಾಸಿಕ ರೂ. 10,000 ಗೌರವ ಧನ ನೀಡಲಾಗುತ್ತದೆ. ಬಿ.ಎ ಸೈಕಾಲಾಜಿ ಅಥವಾ ಬಿಎಸ್‍ಡಬ್ಲ್ಯೂ ಪದವಿ ಹೊಂದಿರಬೇಕು. 18 ರಿಂದ 45 ವರ್ಷ ವಯೋಮಿತಿಯುಳ್ಳ ಮಹಿಳಾ ಅಭ್ಯರ್ಥಿಗಳು ಡಿಸೆಂಬರ್ 14ರ ಒಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್, ಫಳ್ನೀರ್ ರೋಡು, ಕಂಕನಾಡಿ ಇಮೇಲ್ ವಿಳಾಸ -prajnacounsel@gmail.com ದೂ.ಸಂಖ್ಯೆ 0824-2432682, 2432903 ಸಂಪರ್ಕಿಸುವಂತೆ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.