ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮಂಗಳೂರು: ಸ್ಥಳೀಯ ಬಲ್ಮಠ ಸರಕಾರೀ ಪ್ರಥಮ ದರ್ಜೆ ಕಾಲೇಜಿನ ಗ್ರಾಹಕ ವಿದ್ಯಾರ್ಥಿಗಳು ಅಕ್ಟೋಬರ್ 1 ರಂದು ಸುಲ್ತಾನ್ ಜ್ಯುವೆಲ್ಲರಿಗೆ ಭೇಟಿ ನೀಡಿದರು. 

ಗ್ರಾಹಕ ಸಂಘದ ಸಂಯೋಜಕ ಉಪನ್ಯಾಸಕಿ ಮಂಜುಳಾ ಮಲ್ಯ ರವರು ಎಲ್ಲಾ ವಿದ್ಯಾರ್ಥಿಗಳನ್ನು ಕರೆದೊಯ್ದು ಸಂಪೂರ್ಣ ಮಾಹಿತಿಯನ್ನು ನೀಡಿದರು. ಸುಲ್ತಾನ್ ಜ್ಯುವೆಲ್ಲರಿಯ ಎಲ್ಲಾ ಸಿಬ್ಬಂದಿಗಳೂ ವಿದ್ಯಾರ್ಥಿಗಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ಚಿನ್ನದ ಶುದ್ಧತೆ, ಕ್ಯಾರೆಟ್ ನ ನಿರ್ಧಾರದ ಮಾಹಿತಿಯನ್ನು ಉದಾಹರಣೆಯೊಂದಿಗೆ ಒದಗಿಸಿದರು.