ಮಂಗಳೂರು: ಇಂದು ಬೆಳಿಗ್ಗೆ ಏಪ್ರಿಲ್ 29 ರಂದು 06;13 ಕ್ಕೆ ಸರಿಯಾಗಿ ಏಕಾಹ ಭಜನೋತ್ಸವವನ್ನು ವಿಶ್ವ ಹಿಂದೂ ಪರಿಷತ್‍ನ ಮಂಗಳೂರು ಇದರ ಅಧ್ಯಕ್ಷರಾದ ಹೆಚ್ ಕೆ ಪುರುಷೋತ್ತಮರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಒಟ್ಟು 22 ಭಜನಾ ತಂಡಗಳು ದಿನದ 24 ಗಂಟೆ ಭಜನಾ ಸೇವೆಯನ್ನು ನಡೆಸಿಕೊಡಲಿದ್ದಾರೆ. ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಕ್ಷೇತ್ರದ ಭಜನಾ ಸಂಚಾಲಕರಾದ ಉದಯ್ ಕುಮಾರ್ ಆನಂದ್, ಪದ್ಮನಾಭ, ವೀರಪ್ಪ ಹಾಗೂ ಪ್ರಧಾನ ಅರ್ಚಕರಾದ ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು.
ಸಂಜೆ 05:00 ಗಂಟೆಗೆ ಸರಿಯಾಗಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ತಯಾರಿಯು ನಡೆದಿದ್ದು ಇದರಲ್ಲಿ 108 ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಲೋಕ ಕಲ್ಯಾಣಾರ್ಥವಾಗಿ ಹಾಗೂ ದೇಶದ ಜನರಿಗೆ ಸುಖ, ಶಾಂತಿ, ನೆಮ್ಮದಿ ಲಭಿಸುವಂತೆ ಶ್ರೀ ವಿಷ್ಣುವಿನಲ್ಲಿ ಪ್ರಾರ್ಥಿಸುವ ಉದ್ದೇಶದೊಂದಿಗೆ ಈ ಪಾರಾಯಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಕೆ.ಸಿ ನಾೈಕ್ ತಿಳಿಸಿದ್ದಾರೆ.