ಮಂಗಳೂರು; ಯಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ರವರ ಪ್ರತೀಕ್ ಪೂಜಾರಿ ನಿರ್ಮಾಣದ, ಯುವ ನಿರ್ದೇಶಕ ಭರತ್ ಶೆಟ್ಟಿ ನಿರ್ದೇಶನದ "ಪಿಲಿಪಂಜ" ವಿಭಿನ್ನ ಕಥಾ ಹಂದರದ, ವಿಭಿನ್ನ ಶೈಲಿಯ ತುಳು ಚಲನಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಯತು..
ಮುಡಿಪು, ಹೂಹಾಕುವ ಕಲ್ಲು, ವರ್ಕಾಡಿ, ನರಿಂಗಾನ, ಇರಾ ಮುಂತಾದ ಕಡೆ ಸತತ 25 ದಿನಗಳಿಂದ ಚಿತ್ರೀಕರಣ ಗೊಂಡಿತ್ತು. ಇದು ತುಳು ಚಿತ್ರ ರಂಗದಲ್ಲಿ ಹೊಸ ಪ್ರಯೋಗದೊಂದಿಗೆ ವಿಭಿನ್ನವಾಗಿ ಮೂಡಿ ಬರಲಿದೆ.
ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಪ್ರವೀಣ್ ಕೊಡಕ್ಕಲ್, ಶಿವಪ್ರಕಾಶ್ ಪೂಂಜ, ಪ್ರಕಾಶ್ ಶೆಟ್ಟಿ ಧರ್ಮನಗರ, ಪ್ರತೀಕ್ ಪೂಜಾರಿ, ರಕ್ಷಣ್ ಮಾಡೂರು, ರೂಪಶ್ರೀ ವರ್ಕಾಡಿ, ಜಯಶೀಲ ಮಂಗಳೂರು, ವಿಜಯಹರಿ ರೈ, ದಯಾನಂದ ರೈ ಬೆಟ್ಟಂಪಾಡಿ, ರಂಜನ್ ಬೋಳೂರು, ಹೊಸ ಪರಿಚಯ ದಿಶಾರಾಣಿ, ಭಾಸ್ಕರ್ ಮಣಿಪಾಲ ಮುಂತಾದವರು ಬಣ್ಣ ಹಚ್ಚಿದ್ದಾರೆ..
ಛಾಯಾಗ್ರಹಣ ಉದಯ ಬಳ್ಳಾಲ್, ಸಂಗೀತ ಲಾಯ್ ವೆಲಂಟೀನ್ ಸಲ್ದಾನ, ಸಂಕಲನ ಶ್ರೀನಾಥ್ ಪವಾರ್, ಸಹಾಸ ಸುರೇಶ್ ಶೆಟ್ಟಿ, ಸಹ ನಿರ್ದೇಶನ ಅಕ್ಷತ್ ವಿಟ್ಲ, ಸಜೇಶ್ ಪೂಜಾರಿ, ಚಿತ್ರಕಥೆ, ಸಂಭಾಷಣೆ ಸುರೇಶ್ ಬಲ್ಮಠ, ಪ್ರಚಾರ ಬಾಳ ಜಗನ್ನಾಥ ಶೆಟ್ಟಿ. ಶೀಘ್ರದಲ್ಲಿ ದ್ವಿತೀಯ ಹಂತದ ಚಿತ್ರೀಕರಣವನ್ನು ಮುಗಿಸಿ, 2025ರಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ.