ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಆಸ್ತಿಗಳಿಗೆ ಪ್ರಸ್ತುತ ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತಾಗಳ ವಿತರಣೆ ವ್ಯವಸ್ಥೆ ಇದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯುತ್ತಿದ್ದು, ಪ್ರಸ್ತುತ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿರುತ್ತದೆ.
ಈಗಾಗಲೇ ನೀಡಲಾದ ಇ-ಖಾತಾದಲ್ಲಿ ಯಾವುದೇ ತಿದ್ದುಪಡಿಗಳು ಅವಶ್ಯಕವಿದ್ದಲ್ಲಿ ಡಿ. 16 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಸುರತ್ಕಲ್ ವಲಯ ಕಚೇರಿ, ಡಿ. 17 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಕೇಂದ್ರ ಕಚೇರಿ ಲಾಲ್‍ಭಾಗ್ ಹಾಗೂ ಡಿ. 18 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಕದ್ರಿ ವಲಯ ಕಚೇರಿ ಈ ಮೂರು ವಲಯ ಕಚೇರಿಗಳಲ್ಲಿ ವಲಯ ಆಯುಕ್ತರ ಉಸ್ತುವಾರಿಯಲ್ಲಿ ತ್ವರಿತ ತಿದ್ದುಪಡಿಗಾಗಿ ಅದಾಲತ್‍ನ್ನು ನಡೆಸಲಾಗುವುದು.
ಕಟ್ಟಡ ನಂಬ್ರ ತಿದ್ದುಪಡಿಗಾಗಿ -ನೊಂದಾಯಿತ ದಸ್ತವೇಜು, ಕಟ್ಟಡ ತೆರಿಗೆ ಪಾವತಿ ರಶೀದಿ ಪ್ರತಿ, ಹೆಸರು ತಿದ್ದುಪಡಿಗಾಗಿ - ನೊಂದಾಯಿತ ದುರಸ್ತಿ ಪತ್ರ ದಸ್ತವೇಜು, ಕ್ರಯಸಾಧನ, ನೊಂದಾಯಿತ ವೀಲುನಾಮೆ, ದಾನಪತ್ರ, ವಿಸ್ತೀಣ ತಿದ್ದುಪಡಿಗಾಗಿ - ನೊಂದಾಯಿತ ದಸ್ತವೇಜು, ವಿನ್ಯಾಸ ಅನುಮೋದನೆ ಹಾಗೂ ಚಕ್ಕುಬಂಧಿ - ನೊಂದಾಯಿತ ದಸ್ತವೇಜು, ವಿನ್ಯಾಸ ಅನುಮೋದನೆ ಇತ್ಯಾದಿ ದಾಖಲೆಯೊಂದಿಗೆ ಅದಾಲತ್ ನಲ್ಲಿ ಪಾಲ್ಗೊಳ್ಳುವಂತೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.