ಮಂಗಳೂರು:  ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ತಾಲೂಕು ಪಂಚಾಯಿತಿ ಮಂಗಳೂರು, ಸಮುದಾಯ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ಮಂಗಳೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಗ್ರಾಮ ನೀರು ನೈರ್ಮಲ್ಯ ಸಮಿತಿಯ ಮಹಿಳಾ ಸದಸ್ಯರು ಮತ್ತು ಚುನಾಯಿತ ಪ್ರತಿನಿಧಿಗಳ ಒಂದು ದಿನದ ತರಬೇತಿ ಕಾರ್ಯಗಾರವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಉದ್ಘಾಟಿಸಿದರು.

ತಾಲೂಕು ಪಂಚಾಯತ್ ವ್ಯವಸ್ಥಾಪಕಿ ಸುವರ್ಣ ಹೆಗಡೆ, ಜಿಲ್ಲಾ ವ್ಯವಸ್ಥಾಪಕರು ವಿಜ್ಞೇಶ್ ರಾಜ್ ಬಿ.ಕೆ, ವಿಶ್ವ ಬ್ಯಾಂಕಿನ ಸುರೇಶ್ ಬಾಳಿಲ, ಸಹಾಯಕ ಇಂಜಿನಿಯರ್ ಆನಂದ್ ಉಪಸ್ಥಿತರಿದ್ದರು.

ಸಮುದಾಯ ಸಂಸ್ಥೆಯ ಶಿವರಾಂ ಪಿ.ಬಿ ಚರಣ್ ರಾಜ್ ಪಲರೇಶ ಮಣ್ಣೂರ್ ಮಠ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ವಿವಿಧ ಗ್ರಾಮ ಪಂಚಾಯಿತಿಯ ನೀರು ನೈರ್ಮಲ್ಯ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದು.