ಮಂಗಳೂರು:  ನಗರದ ಬಾವುಟಗುಡ್ಡೆಯಲ್ಲಿರುವ ಸಂತ ಅಲೋಶಿಯಸ್‌ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದಲ್ಲಿ  ಇಂಪೆಟಸ್ 2024 ನವೋದ್ಯಮಿಗಳ ದಿನಾಚರಣೆಯನ್ನು ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯೇನಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ವಿಜಯಕುಮಾರ್ ಮಾತನಾಡಿ, ಅನೇಕ ವಿಷಯಗಳು ಸಣ್ಣ ವಿಷಯಗಳಿಂದ ಪ್ರಾರಂಭವಾಗುತ್ತವೆ. ನೀವು ಅದರ ಮೇಲೆ ಕೇಂದ್ರೀಕರಿಸಿದರೆ, ನಿಮ್ಮ ಆಲೋಚನೆಗಳು ದೊಡ್ಡದಾಗುತ್ತವೆ, ಭರವಸೆ ಕಳೆದುಕೊಳ್ಳಬೇಡಿ. ಸಣ್ಣ ಕಲ್ಪನೆ, ಆಲೋಚನೆಗಳು ದೊಡ್ಡ ಬದಲಾವಣೆ ಮಾಡಬಹುದು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅಲೋಶಿಯಸ್ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹ ಕುಲಪತಿ ವಂ. ಡಾ. ಮೆಲ್ವಿನ್  ಡಿಕೂನ್ನಾ ಎಸ್. ಜೆ., ‌ಈ ಯುಗವು  ITBT ಕಂಪನಿ, AI ಮತ್ತು ಇತರ ಹೊಸ ಆವಿಷ್ಕಾರಗಳನ್ನು ವಿಸ್ತರಿಸುವ ಮೂಲಕ ಅನೇಕ ಬದಲಾವಣೆಗಳನ್ನು ತಂದಿದೆ. ವಿದ್ಯಾರ್ಥಿಗಳಿಗೆ ಇಂದು ಹಲವಾರುವಿಷಯಗಳಲ್ಲಿ ವಿವಿಧ ಅವಕಾಶಗಳಿವೆ. ಪ್ರತಿದಿನ ನಾವು ಹೊಸ ಆಲೋಚನೆಯೊಂದಿಗೆ ಬರುತ್ತೇವೆ. ಇವುಗಳು ಜನರ ಮತ್ತು ಸಮಾಜದ ಒಳಿತಿಗಾಗಿ ಹಾಗೂ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಡಾ. ಎಂ. ವಿಜಯಕುಮಾರ್, ಡಾ. ಮಹಮ್ಮದ್ ಝುಭೇರ್, ವಂ. ಡಾ. ಮೆಲ್ವಿನ್ ಡಿಕೂನ್ನಾ ಎಸ್.ಜೆ. ಇವರ ಅಪೂರ್ವ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಾಹೆಯ ಮುಖ್ಯ ನಾವನ್ಯತೆ ಅಧಿಕಾರಿ ಡಾ. ಮಹಮ್ಮದ್ ಝುಬೇರ್, ಸಂತ ಅಲೋಶಿಯಸ್ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಸಚಿವ ಡಾ. ರೊನಾಲ್ಡ್ ನಜ್ಝರತ್, ಸಹ ಸಂಯೋಜಕಿ ಅರ್ಚನ ಯಶೋದರ್ ಉಪಸ್ಥಿತರಿದ್ದರು.

ವಾಣಿಜ್ಯೋದ್ಯಮ ಮತ್ತು ಸಲಹಾ ವಿಭಾಗದ ಡೀನ್ ಡಾ. ಆದರ್ಶ್ ಗೌಡ ಸ್ವಾಗತಿಸಿ, ಸಂಯೋಜಕ ಓಲ್ವಿನ್ ಎಂ ಡಿಸೋಜ ವಂದಿಸಿದರು. ವಿದ್ಯಾರ್ಥಿ ದಿಯಾ ಕಾರ್ಯಕ್ರಮ ನಿರೂಪಿಸಿದರು.